ಕೆ ಆರ್ ಎಸ್ ಪಕ್ಷದ ದೂರಿಗೆ ಕಳಪೆ ರಸ್ತೆ ಕಾಮಗಾರಿ ಪರಿಶೀಲಿಸಿದ ಅಧಿಕಾರಿಗಳ ತಂಡ
ಸಿಂಧನೂರು ತಾಲೂಕಿನ ಸಲಾಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕಳಪೆ ರಸ್ತೆ ಮೇಟಲಿಂಗ್ ಕಾಮಗಾರಿ ಕುರಿತು ಕೆ ಆರ್ ಎಸ್ ಪಕ್ಷದ ವತಿಯಿಂದ ಎರಡು ತಿಂಗಳ ಹಿಂದೆ ಮಾನ್ಯ ತಾಲೂಕ ಪಂಚಾಯತ ಸಿಂಧನೂರು ಹಾಗೂ ಜಿಲ್ಲಾ ಪಂಚಾಯಿತಿ ರಾಯಚೂರು ಅಧಿಕಾರಿಗಳಿಗೆ ದೂರನ್ನು ನೀಡಲಾಗಿತ್ತು. ಇಂದು ಜಿಲ್ಲಾ ಪಂಚಾಯಿತಿ ರಾಯಚೂರು ಒಂಬುಡಸಮನ್ ಹಾಗೂ ಸಾಲಗುಂದ ಪಂಚಾಯತ್ ಜೆ ಇ ಇ ಶರಣಬಸವ ಇವರು ಸ್ಥಳಕ್ಕೆ ಭೇಟಿ ನೀಡಿ ವರದಿ ಪಡೆದು,ಕಾಮಗಾರಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕೆ ಆರ್ ಎಸ್ ಪಕ್ಷದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ನಿರುಪಾದಿ ಕೆ ಗೋಮರ್ಸಿ ಮಾತನಾಡಿ ಸಾಲಗುಂದ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 5 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಅರ್ಧ ಕಿಲೋ ಮೀಟರ್ ಕಳಪೆ ರಸ್ತೆ ಮೇಟಲಿಂಗ್ ನಡೆದಿದ್ದು ಅಧಿಕಾರಿಗಳ ಕರ್ತವ್ಯ ಲೋಪ ಹಾಗೂ ಜನ ಸಾಮಾನ್ಯರ ತೆರಿಗೆ ದುಡ್ಡು ಪೋಲು ಆಗುತ್ತಿದ್ದು ಇದನ್ನು ಗಮನಿಸಿ ಕೆ ಆರ್ ಎಸ್ ಪಕ್ಷದ ತಾಲೂಕ ಘಟಕದ ವತಿಯಿಂದ ದೂರನ್ನು ನೀಡಲಾಗಿತ್ತು. ಇಂದು ಜಿಲ್ಲಾ ಪಂಚಾಯಿತಿ ಮಟ್ಟದ ಅಧಿಕಾರಿಗಳ ತಂಡ ಭೇಟಿ ನೀಡಿ ಕಾಮಗಾರಿ ಪರಿಶೀಲನೇ ನಡೆಸಿದ್ದು ತುಂಬಾ ಉಪಯುಕ್ತ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಚನ್ನಬಸವ ಸೋಮಲಪುರ, ಕಾರ್ಯದರ್ಶಿ ಶರಣಪ್ಪ ಗೋರೆಬಾಳ, ಜಗದೀಶ್ ಸುಲ್ತನಪೂರ, ಶರಣಪ್ನಾಗರಾಳ ,ಪಕೀರಪ್ಪ , ರಡ್ಡೆಪ್ಪ,ಕೆಂಚಪ್ಪ ಮತ್ತಿತರರು ಇದ್ದರು.
ವರದಿ : ಡಿ ಆಲಂಬಾಷಾ