ಬಳಗಾನೂರು ಸಸಿ ನೆಡುವ ಮೂಲಕ ಪುರಾಣ ಪ್ರಾರಂಭ
ಮಸ್ಕಿ ತಾಲೂಕಿನ ಬಳಗಾನೂರ ಗ್ರಾಮದ ಶ್ರೀ ಮೌನೇಶ್ವರ ಜಾತ್ರಾ ಅಂಗವಾಗಿ ಶ್ರೀ ಮೌನೇಶ್ವರರ ಪಲ್ಲಕ್ಕಿ ಉತ್ಸವ ಹಾಗೂ ಶ್ರೀ ಅಜಾತ ನಾಗಲಿಂಗಸ್ವಾಮಿಗಳ ಮಹಾಪುರಾಣ ಮಹೋತ್ಸವ ಕಾರ್ಯಕ್ರಮವನ್ನು ಸಸಿನೆಟ್ಟು ನೀರುಣಿಸುವ ಮೂಲಕ ಚಾಲನೆ ನೀಡಲಾಯಿತು. ಈ ಪುರಾಣ ಪ್ರವಚನ ಕಾರ್ಯಕ್ರಮ ಹದಿನೈದು ದಿನಗಳ ಕಾಲ ನಡೆಯಲಿದ್ದು ಪ್ರತಿದಿನ ದೇವರಿಗೆ ರುದ್ರಾಭಿಷೇಕ,ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಈ ಸಂದರ್ಭದಲ್ಲಿ ಶರಭಯ್ಯ ಸ್ವಾಮಿ,ಬಸವರಾಜ ಸಾಲವಾಡಗಿ,ವನಸಿರಿ ಫೌಂಡೇಶನ್ ಮಸ್ಕಿ ತಾಲೂಕ ಅದ್ಯಕ್ಷ ರಾಜು ಬಳಗಾನೂರ, ಶೇಖರಪ್ಪ ಸುಲ್ತಾನಾಪುರ, ಗುಂಡಪ್ಪ ವಿಶ್ವಕರ್ಮ,ನಾಗರಾಜ ಕಂಬಾರ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.