ವಿಜ್ರಂಬಣೆಯಿಂದ ಜರುಗಿದ ಮಾದಯ್ಯ ತಾತನವರ 61ನೇ ಪುಣ್ಯ ಸ್ಮರಣೋತ್ಸವ...
ತುರವಿಹಾಳ ಸುಕ್ಷೇತ್ರ ಕೋಟಿ ಲಿಂಗಪುರ ಗ್ರಾಮದಲ್ಲಿ ಲಿಂ.ಪ.ಪೂ ಶ್ರೀ ಮಾಧಯ್ಯ ತಾತನವರ 61 ನೇ ವರ್ಷದ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ತಾತನ ಕರ್ತೃ ಗದ್ದುಗೆಗೆ ರುದ್ರಾ ಭಿಷೇಕ ಸಕಲ ಮಂಗಳವಾದ್ಯಗಳೋಂದಿಗೆ ಗಂಗೆಯ ಪೂಜೆ,ಮಾದಯ್ಯ ತಾತನವರ ಭಾವಚಿತ್ರ ಮೆರವಣಿಗೆಯು ಶ್ರಿ ಮಾದಯ್ಯ ಸ್ವಾಮಿ ಗುರುವಿನ್,ಶ್ರೀ ಚಿದಾನಂದಯ್ಯ ಗುರುವಿನ್ ಮತ್ತು ವಿವಿಧ ಮಠಾಧೀಶರು ಹಾಗೂ ಹಿರಿಯರ ಸಮಸ್ತ ಸದ್ಭಕ್ತರ ಸಮ್ಮುಖದಲ್ಲಿ ವಿಜ್ರಂಬಣೆಯಿಂದ ಜರುಗಿತು.
ಕಾರ್ಯಕ್ರಮದಲ್ಲಿ ರಾಘವೇಂದ್ರ ಹಿಟ್ನಾಳ ಶಾಸಕರು ಕೊಪ್ಪಳ ಜ್ಯೋತಿ ಬೆಳಗಿಸಿದರು, ಆರ್ ಬಸನಗೌಡ ತುರುವಿಹಾಳ ಶಾಸಕರು ಮಸ್ಕಿ ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಕೆ.ಕರಿಯಪ್ಪ ಸಿಂದನೂರು ಶ್ರಾವಣ ಮಾಸದಲ್ಲಿ ನಡೆಯುವ ಇಂಥ ಕಾರ್ಯಕ್ರಮದಲ್ಲಿ ಸಾನಿದ್ಯವಹಿಸಿರುವ ವಿವಿಧ ಮಠಾಧಿಶರ ಆಶಿರ್ವಚನವನ್ನು ಶ್ರವಣಮಾಡಿ ಮನನ ಮಾಡಿಕೊಂಡು ಉತ್ತಮ ನಾಗರಿಕ, ಆಡಳಿತಗಾರರಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ನಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳೋಣ, ಇಂಥ ಧಾರ್ಮಿಕ ಸಭೆಗಳು ಜನರಲ್ಲಿ ಜಾಗೃತಿಯನ್ನುಂಟು ಮಾಡುತ್ತವೆ ಶರಣರ ನಡೆಯಲ್ಲಿ ನಾವು ಬದಕನ್ನು ಕಟ್ಟಿಕೊಳ್ಳೂಣ ಎಂದರು.
ಕಾರ್ಯಕ್ರಮದಲ್ಲಿ ನೂತನ ಶಾಸಕರಿಗೆ ಹಾಗೂ ಎಸ್. ಎಸ್. ಎಲ್. ಸಿ, ಹಾಗೂ ದ್ವಿತೀಯ ಪಿ ಯು ಸಿ ಯಲ್ಲಿಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಸಿದ್ದರಾಮಯ್ಯನಂದಪುರಿ ಮಹಾಸ್ವಾಮಿಗಳು ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರು ಪೀಠ ಶಾಖಾ ಮಠ ತಿಂತೀನಿ ಬ್ರಿಜ್,ರೇವಣಸಿದ್ದೇಶ್ವರ ಶಾಂತಮ್ಮಯ್ಯ ಮಹಾಸ್ವಾಮಿ
ಗಳು ರೇವಣಸಿದ್ದೇಶ್ವರ ಗುರುಪೀಠ ಸುಕ್ಷೇತ್ರ ಅಗತ್ಯಿರ್ಥ, ಶ್ರೀ ಮಹಾಂತ ಸ್ವಾಮಿಗಳು ಕಲ್ಯಾಣ ಆಶ್ರಮ ತಿಮ್ಮಾಪುರ, ಶ್ರೀ ಅಮರಗುಂಡಯ್ಯ ಶಿವಾಚಾರ್ಯ ಮಹಾಸ್ವಾಮಿಗಳು ಪುರವರ ಹಿರೇಮಠ ತುರುವಿಹಾಳ, ಸಿದ್ದರಾಮೇಶ್ವರ ಶರಣರು ಸಿದ್ದಾಶ್ರಮ ಬಂಗಾರಿ ಕ್ಯಾಂಪ್,ಶ್ರೀ ಗುಂಡಯ್ಯ ಅಪ್ಪಾಜಿ ಸರ್ವೇಶ್ವರ ಮಠ ತುರುವಿಹಾಳ, ನಂಜುಂಡಯ್ಯ ಗುರುವಿನ್ ಸಿಂಧನೂರ, ಮುದಿಸಂಗಯ್ಯ ಸ್ವಾಮಿ ತುರವಿಹಾಳ, ಸಿದ್ದಯ್ಯ ಗುರುವಿನವರು ಗಬ್ಬುರ್, ಸಿದ್ದರಾಮಯ್ಯ ಗುರುವಿನ್ ಬಸಾಪಟ್ಟಣ, ವಹಿಸಿದ್ದರು
ಜನಪ್ರತಿನಿಧಿಗಳಾದ ಶ್ರೀ ಕೆ ವಿರೂಪಾಕ್ಷಪ್ಪ ಮಾಜಿ ಸಂಸದರು ಸಿಂಧನೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮುಖಂಡರಾದ ನಾಗಪ್ಪ ಸಾಲೊಣಿ ಕಾರಟಿಗಿ,ಮಲ್ಲನಗೌಡ ದೇವರಮನಿ,ಸಿದ್ದಪ್ಪ ನೀರಲೂಟಿ,ನಿರುಪಾದೆಪ್ಪ ವಕೀಲರು,ನಲ್ಲ ವೆಂಕಟೇಶ್ವರ ಮತ್ತು ತುರ್ವಿಹಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಭಾಗಿಯಾಗಿದ್ದರು.
ರಿಪೋರ್ಟರ್ ಮೆಹಬೂಬ ಮೊಮೀನ.