ಅಮರ ಶ್ರೀ ಆಲದ ಮರಕ್ಕೆ ಭೇಟಿ ನೀಡಿದ ಶಹಪುರ ಗುರುಪಾದಯ್ಯ ಮಹಾಸ್ವಾಮಿಗಳು
ಸಿಂಧನೂರಿನ ಅಮರ ಶ್ರೀ ಆಲದ ಮರಕ್ಕೆ ಶ್ರೀ ಮ,ನಿ,ಪ್ರ,ಗುರುಪಾದಯ್ಯ ಮಹಾಸ್ವಾಮಿಗಳು ಫಕೀರೇಶ್ವರ ಮಠ ಶಹಪುರ,ಹಾಗೂ ಶ್ರೀ ಮ,ನಿ,ಪ್ರ,ಮಹಾಲಿಂಗ ಮಹಾಸ್ವಾಮಿಗಳು ವಿರಕ್ತಮಠ ಯದ್ದಲದೊಡ್ಡಿ ಶ್ರೀಗಳು ಭೇಟಿ ನೀಡಿ ವೀಕ್ಷಣೆ ಮಾಡಿದರು.
ನಂತರ ಶಹಪುರ ಪಕೀರೇಶ್ವರ ಮಠದಶ್ರೀ.ಮ.ನಿ.ಪ್ರ. ಗುರುಪಾದಯ್ಯ ಮಹಾಸ್ವಾಮಿಗಳು ಮಾತನಾಡಿ ವನಸಿರಿ ತಂಡ ಕಡಿದು ಹಾಕಿದ ಆಲದ ಮರಕ್ಕೆ ಮರುಜೀವ ನೀಡಿ ವೃಕ್ಷಮಾತೆಯನ್ನು ಮತ್ತೆ ಹಚ್ಚ ಹಸಿರಿನಿಂದ ಕಂಗೋಳಿಸುವಂತೆ ಮಾಡಿದ ವನಸಿರಿ ತಂಡದ ಕಾರ್ಯ ತುಂಬಾ ಶ್ಲಾಘನೀಯ.ಈ ಮರವನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ಅಮರೇಗೌಡ ಅವರು ವೃಕ್ಷಮಾತೆಯನ್ನು ಪ್ರೀತಿ ವಾತ್ಸಲ್ಯದಿಂದ ಬೆಳಸಿದ್ದು ನೋಡಿದರೆ ಅವರು ಪರಿಸರವನ್ನು ಸಂರಕ್ಷಿಸಲು ಎಷ್ಟು ಕಷ್ಟ ಪಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಾಗುತ್ತೇ ಸಕಲ ಜೀವ ರಾಶಿಗಳು ಈ ಪರಿಸರವನ್ನು ಅವಲಂಬಿಸಿವೆ ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಿ ಬೆಳಸಲು ಪ್ರತಿಯೊಬ್ಬರೂ ಮುಂದಾಗಬೇಕು ಆಗ ವೃಕ್ಷಮಾತೆಯ ಮಳೆ ಬೆಳೆಯನ್ನು ಚೆನ್ನಾಗಿ ನೀಡುತ್ತಾಳೆ.ದೇವರು ಅಮರೇಗೌಡ ಮಲ್ಲಾಪೂರ ಅವರಿಗೆ ಈ ಪರಿಸರ ಸೇವೆಯಲ್ಲಿ ತೃಪ್ತಿ ನೀಡಲಿ ಇನ್ನಷ್ಟು ಪರಿಸರ ಮಾತೆಯ ಸೇವೆ ಮಾಡುವಂತಾಗಲಿ ಹಾರೈಸಿದರು.
ಅಮರ ಶ್ರೀ ಆಲದ ವೀಕ್ಷಣೆ ಮಾಡಿದ ಶ್ರೀಗಳಿಗೆ ವನಸಿರಿ ತಂಡದ ವತಿಯಿಂದ ಬಿಲ್ವ ಪತ್ರಿ ಗಿಡಗಳನ್ನು ಉಡುಗೊರೆಯಾಗಿ ನೀಡಿಲಾಯಿತು,
ಈ ಸಂದರ್ಭದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ,ಅಮರಯ್ಯ ಪತ್ರಿಮಠ ಶಿಕ್ಷಕರು,ವನಸಿರಿ ಫೌಂಡೇಶನ್ ಸಹಕಾರ್ಯದರ್ಶಿ ರಂಜಾನಸಾಬ,ಪ್ರವೀಣ Sdmc ಅಧ್ಯಕ್ಷ ಶಾಸಕರ ಮಾದರಿ ಶಾಲೆ pwd ಕ್ಯಾಂಪ್,ಚನ್ನಪ್ಪ ಕೆ.ಹೊಸಹಳ್ಳಿ ವನಸಿರಿ ಜಾಲತಾಣದ ಅದ್ಯಕ್ಷರು ಉಪಸ್ಥಿತರಿದ್ದರು.