ಜಿಲ್ಲಾ ಮಟ್ಟಕ್ಕೆ ಎಮ್ಮಿಗನೂರಿನ ಕೆಪಿಎಸ್ ಶಾಲೆ ಬಾಲಕರ ಕಬ್ಬಡ್ಡಿ ಆಯ್ಕೆ
ಕಂಪ್ಲಿ : ಕಂಪ್ಲಿ ಸಮೀಪದ ಎಮ್ಮಿಗನೂರಿನ ಕರ್ನಾಟಕ ಪಬ್ಲಿಕ್ ಶಾಲೆ, ವೇಣಿಕ್ಯಾಂಪ್ , ಶಾಲೆಯ ಮಕ್ಕಳು ತಾಲೂಕು ಮಟ್ಟದಲ್ಲಿ ಜಯಗಳಿಸಿ ಜಿಲ್ಲೆ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಗುರುಗಳಾದ ಪಿ ಮಾಬಾಷ ಮಾತಾಡಿ, ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟ ಕುರುಗೋಡುನಲ್ಲಿ ನೆಡೆದ ಬಾಲಕರ ಕಬ್ಬಡಿಯಲ್ಲಿ ಪಂದ್ಯಾವಳಿಯಲ್ಲಿ ನಮ್ಮ ಶಾಲೆಯ ಮಕ್ಕಳು ಮುರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಮುಷ್ಟಗಟ್ಟ ಶಾಲಾ ಮಕ್ಕಳ ವಿರುದ್ಧ ಜಯಗಳಿಸಿ ಪ್ರಥಮ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿ ಜಿಲ್ಲೆ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಇದೆ ವೇಳೆ ಮಕ್ಕಳ ಸಾಧನೆಗೆ ಸಿಬ್ಬಂದಿ, SDMC ಅಧ್ಯಕ್ಷರು, ಸದಸ್ಯರು ಊರಿನ ಹಿರಿಯರು ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷರಾದ ವೀರನ ಗೌಡ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ತುಕಾರಾಂ ಗೊರವ, ತಾಲೂಕು ನೌಕರರ ಸಂಘದ ಅಧ್ಯಕ್ಷರಾದ ಗುಂಡಪ್ಪನವರ ನಾಗರಾಜ್, ಶಿಕ್ಷಕರ ಸಂಘದ ಜಿಲ್ಲಾ ಉಪಾದ್ಯಕ್ಷರು ಬಿ ಚಂದ್ರಶೇಖರಪ್ಪ, ಸಹ ಕಾರ್ಯದರ್ಶಿ ಶೇಕ್ಷವಲಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.