ಬದಾಮಿ : ರಾಜ್ಯೋತ್ಸವದ ಅಂಗವಾಗಿ ನಾಡದೇವಿ ಭುವನೇಶ್ವರಿ ಮತ್ತು ಇಮ್ಮಡಿ ಪುಲಕೇಶಿ ಭಾವಚಿತ್ರದೊಂದಿಗೆ ಬೃಹತ್ ಕನ್ನಡ ಧ್ವಜದ ಮೆರವಣಿಗೆ.
ಬಾಗಲಕೋ ಟೆ ಜಿಲ್ಲೆಯ ಬಾದಾಮಿಯಲ್ಲಿ 68 ನೇ ಕರ್ನಾಟಕ ರಾಜೊತ್ಸವ ಮತ್ತು ಕರ್ನಾಟಕವೆಂದು ನಾಮಕರಣಗೊಂಡ 50ನೇ ವರ್ಷದ ಪ್ರಯುಕ್ತ ವಿವಿಧ ಸಾಧಕರನ್ನು ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಳೆದ 68 ವರ್ಷದಿಂದ ನಾಡ ಹಬ್ಬವಾಗಿ ಆಚರಿಸುತ್ತಾ ಬಂದಿದ್ದು, ನಮ್ಮ ನಾ ಡಿನ ಹೆಮ್ಮೆ . ತಾಯಿ ಭಾರತಾಂಭೆಯ ಮಡಿಲಿನಲ್ಲಿ ಮೈಸೂರು ರಾಜ್ಯವೆಂದು ರಚನೆಯಾಗಿ ನಂತರ ಕರ್ನಾಟಕವೆಂದು ಹೆಸರು ಬದಲಾವಣೆಯಾಗಿ 50 ವರ್ಷ ಸಂದ ಈ ಸಂದರ್ಭದಲ್ಲಿ ಚಾಲುಕ್ಯರ ನಾಡು ಐತಿಹಾಸಿಕ ಬಾದಾಮಿಯ ಜನತೆ ನಾಡದೇವಿ ಭುವನೇಶ್ವರಿಯ ಭಾವಚಿತ್ರವನ್ನು ರಥದ ಮಾದರಿಯಲ್ಲಿರಿಸಿ ಮೆರವಣಿಗೆ ಮಾಡಿದರು.
ಬದಾಮಿಯ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ಕಾರ್ಯಕ್ರಮದ ನೇತೃತ್ವವಹಿಸಿ ಬಾದಾಮಿ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಇಲಾಖೆಗಳ ಪ್ರಮುಖ ಅಧಿಕಾರಿಗಳ ಸಮೇತ ಬೇಧ ಭಾವಗಳಿಲ್ಲದೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು ಪ್ರಶಂಸಾರ್ಹವಾಗಿತ್ತು. ತಾಲೂಕಿನ ದಂಡಧಿಕಾರಿಗಳಾದ ಜೆ.ಬಿ.ಮಜ್ಜಗಿಯವರು ಉತ್ಸವ ಮೆರವಣಿಗೆಯ ನೇತೃತ್ವವಹಿಸಿ ಮತ್ತು ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಎಲ್ಲ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ತಮ್ಮ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಮಹಾ ಪುರುಷರ ಪೋಷಾಕುಗಳನ್ನು ಹಾಕಿಸಿ ಮೆರವಣಿಗೆ ಕೇಂದ್ರಬಿಂದುವಾಗಿಸಿದ್ದರು. ಅದರಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಾಯುವ್ಯ ಸಾರಿಗೆ ಸಂಸ್ಥೆ, ಆರೋಗ್ಯ ಇಲಾಖೆ, ಹುಬ್ಬಳ್ಳಿ ವಿದ್ಯುತ್ ನಿಗಮ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಮ್ಮ ಸರ್ವ ಸಿಬ್ಬಂದಿಗಳೊಂದಿಗೆ ಭಾಗವಹಿಸಿ ನಾಡ ಉತ್ಸವಕ್ಕೆ ಕಳೆ ತಂದಿದ್ದರು.
ವರದಿ : ವೀರೇಶ ಮುಚಖಂಡಿಮಠ

