BREAKING : ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರ್ ಕಾರು ಅಪಘಾತ

 

ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರ್ ಕಾರು ಅಪಘಾತ

***********

ವಿಜಯಪುರದಲ್ಲಿ ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರ್ ಕಾರು ಅಪಘಾತವಾಗಿದೆ. ವಿಜಯಪುರಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿದ ಹಿನ್ನೆಲೆ.ಸಿದ್ದರಾಮಯ್ಯ ಭೇಟಿಗೆ ಆಗಮಿಸಿದ್ದ ವೀಣಾ ಕಾಶಪ್ಪನವರ.

ವೀಣಾ ಕಾಶಪ್ಪನವರ, ಹುನಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ. ವಿಜಯಪುರ ನಗರದ ಸಿಂದಗಿ ಬೈಪಾಸ್ ಬಳಿ ಅಪಘಾತ. ಬೈಕ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ಮುಂದಿನ ಕಾರ್‌ಗೆ ಡಿಕ್ಕಿ ಬಾಗಲಕೋಟೆ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಹಾಗೂ ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರಗೆ ಗಂಭೀರ ಗಾಯ.

ಕಾರಿನಲ್ಲಿದ್ದ ಓರ್ವ ಹಾಗೂ ಬೈಕ್ ಸವಾರನಿಗೆ ಗಾಯ.‌ ವಿಜಯಪುರ ಸ್ಥಳೀಯ ಆಸ್ಪತ್ರೆಗೆ ವೀಣಾ ಕಾಶಪ್ಪನವರಗೆ ಚಿಕಿತ್ಸೆ ನೀಡಲಾಗಿದೆ. ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಜಯಪುರ ನಗರದ ಜೆಎಸ್ಎಸ್ ಆಸ್ಪತ್ರೆಗೆ ದಾಖಲಾಗಿರುವ ವೀಣಾ … ಪತಿ ಶಾಸಕ ವಿಜಯಾನಂದ ಕಾಶಪ್ಪನವರ್ ಆಸ್ಪತ್ರೆಗೆ ಭೇಟಿ, ಆರೋಗ್ಯ ವಿಚಾರಣೆ.. ಪತ್ನಿಯನ್ನ ಭೇಟಿ ಮಾಡಿ ಆರೋಗ್ಯ‌ ವಿಚಾರಿಸಿದ ವಿಜಯಾನಂದ. ಮುದ್ದೇಬಿಹಾಳ ಕಾಂಗ್ರೆಸ್ ಶಾಸಕ ಅಪ್ಪಾಜಿ ನಾಡಗೌಡ ಸಹ ಆಸ್ಪತ್ರೆಗೆ ಭೇಟಿ.



ಶಾಸಕ ವಿಜಯಾನಂದ ಜೊತೆಗೆ ಆಗಮಿಸಿದ ಅಭಿಮಾನಿಗಳು…. ಮಾಧ್ಯಮಗಳಿಗೆ ಶಾಸಕ ವಿಜಯಾನಂದ ಕಾಶಪ್ಪನವರ ಪ್ರತಿಕ್ರಿಯೆ. ಯಾವುದೇ ಗಂಭೀರ ಗಾಯಗಳಿಲ್ಲ, ಎಡಗೈಗೆ ಗಾಯವಾಗಿದೆ. ಬೈಕ್ ಸವಾರರ ಜೀವ ಉಳಿಸಲು ಹೋಗಿ ಈ ಅಪಘಾತ ನಡೆದಿದೆ.

ಅಪಘಾತ ಬಳಿಕ ಕಾರ್‌ನ ಏರ್‌ಬ್ಯಾಗ್ ಬ್ಲಾಸ್ಟ್ ಆಗಿದೆ. ಏರ್‌ಬ್ಯಾಗ್ ಬ್ಲಾಸ್ಟ್ ಆದ ಪರಿಣಾಮ ವೀಣಾ ಕೈಗೆ ಸುಟ್ಟು ಗಾಯ. ಈಗಾಗಲೇ ವೈದ್ಯರು ಸಿಟಿ ಸ್ಕ್ಯಾನಿಂಗ್ ಮಾಡಿದ್ದಾರೆ, ಎಲ್ಲ ರಿಪೋರ್ಟ್ ನಾರ್ಮಲ್ ಇವೆ. ನಾಳೆ ಬೆಳಿಗ್ಗೆವರೆಗೆ ಅಬ್ಜರ್ವೆಶನ್ ಮಾಡಲಿದ್ದಾರೆ, ಬಳಿಕ ಡಿಶ್ಚಾರ್ಜ್ ಮಾಡುತ್ತಾರೆ ಎಂದು ಮಾಧ್ಯಮಗಳಿಗೆ ವೀಣಾ ಕಾಶಪ್ಪನವರ್ ಪತಿ ಶಾಸಕ ವಿಜಯಾನಂದ ಹೇಳಿದ್ದಾರೆ.

ಇತ್ತ ವೀಣಾ ಕಾಶಪ್ಪನವರ್ ಗೆ ಚಿಕಿತ್ಸೆ ನೀಡಿದ ವೈದ್ಯ ಶಿಶಿರ್ ಪ್ರತಿಕ್ರಿಯೆ. ಯಾವುದೇ ರೀತಿ ಹೆದರುವ ಅವಶ್ಯಕತೆ ಇಲ್ಲ, ನಾರ್ಮಲ್ ಇದ್ದಾರೆ. ನಾಳೆ ಡಿಶ್ಚಾರ್ಜ್ ಮಾಡಲಿದ್ದೇವೆ. ಅಭಿಮಾನಿಗಳು, ಹಿತೈಷಿಗಳು ಭಯಪಡುವ ಅಗತ್ಯವಿಲ್ಲ ಎಂದರು

Previous Post Next Post

Contact Form

f="https://unpkg.com/video.js/dist/video-js.css" rel="stylesheet">