Sindhanuru : ಕೆ.ಹೊಸಹಳ್ಳಿ ಶಾಲೆ ಹಸಿರೀಕರಣ ಮಾಡುವಲ್ಲಿ ಚನ್ನಪ್ಪ ವಿಶ್ವಕರ್ಮ ಅವರ ಕಾರ್ಯ ಶ್ಲಾಘನೀಯ : ವೆಂಕಟೇಶ ಮಡಿವಾಳ

ಕೆ.ಹೊಸಹಳ್ಳಿ ಶಾಲೆ ಹಸಿರೀಕರಣ ಮಾಡುವಲ್ಲಿ ಚನ್ನಪ್ಪ ವಿಶ್ವಕರ್ಮ ಅವರ ಕಾರ್ಯ ಶ್ಲಾಘನೀಯ : ವೆಂಕಟೇಶ ಮಡಿವಾಳ

ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಚನ್ನಪ್ಪ ವಿಶ್ವಕರ್ಮ ಅವರು ತಮ್ಮ ಮಗುವಿನ ಹುಟ್ಟು ಹಬ್ಬದ ಸವಿನೆನಪಿಗಾಗಿ 31 ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಸಿ ನೆಟ್ಟು ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೆ.ಹೊಸಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲುಸ್ತುವಾರಿ ಸಮಿತಿ(SDMC)ಯ ಅಧ್ಯಕ್ಷರಾಗಿರುವ ವೆಂಕಟೇಶ ಮಡಿವಾಳ ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ.ಸಸಿಗಳನ್ನು ನೆಟ್ಟು ಪೋಷಣೆ ಮಾಡಿದರೆ ನಮಗೆ ಶುದ್ಧವಾದ ಗಾಳಿ ದೊರಕುತ್ತದೆ ಜೊತೆಗೆ ನಮ್ಮ ಆರೋಗ್ಯ ಕೂಡಾ ಚೆನ್ನಾಗಿರಲು ಸಾದ್ಯ ಇದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು.ಸಿಂಧನೂರಿನ ವನಸಿರಿ ಫೌಂಡೇಶನ್ ತಂಡ ಈಗಾಗಲೇ ಪರಿಸರ ಸಂರಕ್ಷಣೆಯಲ್ಲಿ ತೊಡಗಿ ರಾಜ್ಯಾದ್ಯಂತ ಹೆಸರುವಾಸಿಯಾಗಿದೆ ಇಂತಹ ಒಂದು ತಂಡ ಕಳೆದ 3 ವರ್ಷಗಳಿಂದ ನಮ್ಮ ಶಾಲೆಗೆ ವಿವಿಧ ರೀತಿಯ ಸಸಿಗಳನ್ನು ನೆಟ್ಟು ಪೋಷಿಸುತ್ತಾ ಬಂದಿದೆ ವನಸಿರಿ ಫೌಂಡೇಶನ್ ಕಾರ್ಯ ಹಾಗೂ ನಮ್ಮ ಹಳೆಯ ವಿದ್ಯಾರ್ಥಿಗಳ ಕಾರ್ಯವೈಕರಿಯಿಂದ ಇಂದು ನಮ್ಮ ಶಾಲೆ ಹಸಿರೀಕರಣ ಹೊಂದಿ ಕಂಗೊಳಿಸುವಂತಾಗಿದೆ.ಇಂತಹ ಒಂದು ರಾಜ್ಯದಲ್ಲೆ ಮನೆಮಾತಾಗಿರುವ ವನಸಿರಿ ಫೌಂಡೇಶನ್ ತಂಡದಲ್ಲಿ ನಮ್ಮೂರಿನ ಯುವಕ ಚನ್ನಪ್ಪ ವಿಶ್ವಕರ್ಮ ಅವರು ಇರುವುದು ನಮಗೆಲ್ಲ ಹೆಮ್ಮೆಯ ವಿಷಯ. ನಮ್ಮ ಶಾಲೆ ಹಸಿರೀಕರಣ ಹೊಂದಲು ನಮ್ಮೂರಿನ ಯುವಕ ಚನ್ನಪ್ಪ ವಿಶ್ವಕರ್ಮ ಅವರ ಹಾಗೂ ಹಳೆಯ ವಿದ್ಯಾರ್ಥಿಗಳ ಹಾಗೂ ಶಾಲೆಯ ಶಿಕ್ಷಕರ ಶ್ರಮ ತುಂಬಾ ಶ್ಲಾಘನೀಯವಾದದ್ದು ಆದಾಗ್ಯೂ ಕೂಡ ಚನ್ನಪ್ಪ ಅವರು ತಮ್ಮ ಮಗುವಿನ ಹುಟ್ಟುಹಬ್ಬದ ಸವಿನೆನಪಿಗಾಗಿ 31 ಹಣ್ಣಿನ ಸಸಿಗಳನ್ನು ನೆಡುತ್ತಿರುವುದು ಶ್ಲಾಘನೀಯ ಇಂತಹ ಕಾರ್ಯಕ್ಕೆ ನಮ್ಮ ಶಾಲೆಯ ಶಿಕ್ಷಕರು ಹಾಗೂSDMC ಸದಸ್ಯರು ಸಹಕಾರ ಮತ್ತು ಪ್ರೋತ್ಸಾಹ ಸದಾಕಾಲ ಇರಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಸಾಮಾಜಿಕ ಜಾಲತಾಣದ ಅದ್ಯಕ್ಷ ಚನ್ನಪ್ಪ ವಿಶ್ವಕರ್ಮ,ಶಾಲೆಯ ಪ್ರಭಾರಿ ಮುಖ್ಯಗುರುಗಳಾದ ಹುಸೇನ್ ಸಾಬ್,ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯ ಶರಣಬಸವ,ಶಾಲೆಯ ಶಿಕ್ಷಕರಾದ ದೊಡ್ಡಪ್ಪ,ಛತ್ರಪ್ಪ,ಕಲ್ಲನಗೌಡ,ಸೌಮ್ಯ,ಪರ್ವಿನ್ ಹಾಗೂ ಅತಿಥಿ ಶಿಕ್ಷಕೀಯರು,ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">