ಓಪನ್ ನ್ಯಾಷನಲ್ ಮಾಸ್ಟರ್ ಗೇಮ್ ನಲ್ಲಿ ಸಾಧನೆ
ಹುಬ್ಬಳ್ಳಿ : ಮಾಸ್ಟರ್ ಗೇಮ್ ಆಫ್ ಕರ್ನಾಟಕ ವತಿಯಿಂದ ಧಾರವಾಡದಲ್ಲಿ ಇತ್ತೀಚಿಗೆ ನಡೆದ ಓಪನ್ ಮಾಸ್ಟರ್ ಗೇಮ್ ನಲ್ಲಿ ನಿಂಗಪ್ಪ ಪುಟ್ಟಣ್ಣವರು, ಮಾರುತಿ ಬಸವರಾಜ್, ಅವರು ಉತ್ತಮ ಸಾಧನೆ ಮಾಡಿ ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕಿಗೆ ಆಯ್ಕೆಯಾಗಿದ್ದಾರೆ,
ರೈಲ್ವೆ ಹೆಡ್ ಕಾನ್ಸ್ಟೇಬಲ್(RPF) ನಿಂಗಪ್ಪ ಪುಟ್ಟಣ್ಣವರು 60 ಮೀಟರ್ 100 ಮೀಟರ್ 200 ಮೀಟರ್ 300 ಮೀಟರ್ 400. ಮೀಟರ್ ಲಾಂಗ್ ಜಂಪ್ ಮತ್ತು ಪುರುಷರ ರಿಲೇ 400 ಮೀಟರ್ ಮತ್ತು ಮಿಕ್ಸ್ ರಿಲೇ 400 ಮೀಟರ್ ಸ್ಪರ್ಧೆಯಲ್ಲಿ ಒಟ್ಟು ಏಳು ಚಿನ್ನದ ಪದಕ ಗಳಿಸಿದ್ದಾರೆ ಹಾಗೂ ಇವರು ಕಬ್ಬಡಿಯ ಯುನಿವರ್ಸಿಟಿ ಬ್ಲೂ ನ್ಯಾಷನಲ್ ಕಬಡ್ಡಿ ಆಟಗಾರ ಆಗಿರುತ್ತಾರೆ


