ವಧು, ವರರ ವಾಹನ ಡಿವೈಡರ್ ಡಿಕ್ಕಿ ಗಂಬೀರ ಗಾಯ. ವರ್ಷಗತಿಸಿದರೂ ಪೂರ್ಣಗೊಳ್ಳದ ಕಾಮಗಾರಿ : ಬೇಸತ್ತ ಸಾರ್ವಜನಿಕರು.
ಸಿಂಧನೂರಿನಿಂದ ಮದುವೆ ಮುಗಿಸಿಕೊಂಡು ಕಲಾಲಬಂಡಿ ಗ್ರಾಮಕ್ಕೆ ತೆರಳುತ್ತಿದ ವಧು, ವರರ ವಾಹನ ತುರುವಿಹಾಳ ಪಟ್ಟಣದ ಮೂಲಕ ಹಾದು ಹೋಗುವ ಸಂದರ್ಭದಲ್ಲಿ ಹೆದ್ದಾರಿ ಡಿವೈಡರ್ ಡಿಕ್ಕಿ ಹೋಡೆದು ಇಬ್ಬರಿಗೆ ಗಂಭಿರಗಾಯವಾಗಿದ್ದು ಇನ್ನೂಳಿದ ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ತುರ್ವಿಹಾಳ ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಘಟನೆ ನಡೆದಿದೆ.
ಈ ಹಿಂದೆಯು ಕೂಡ ಸುಮಾರು 10ಕ್ಕೂ ಅಧಿಕ ಅನಾಹುತವು ಸಂಭವಿಸಿದರು ಅಧಿಕಾರಿಗಳಾಲಿ ಗುತ್ತಿಗೆದಾರರಾಗಲಿ ತಮಗೆ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ ದಂತೆ ವರ್ತಿಸುತ್ತಿರುವುದು ವಿಪರ್ಯಾಸ ಸಂಗತಿಯಾಗಿದೆ.
ಈ ಸರಣಿ ಅಪಘಾತಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿಯ ಕಿಂಚಿತ್ತು ಕ್ರಮ ಕೈಗೊಳ್ಳದೇ ನಿದ್ದಗೆ ಜಾರಿರುವುದು ಸಾರ್ವಜನಿಕರ ಆಕ್ರೋಷಕ್ಕೆ ಕಾರಣವಾಗಿದೆ.
ಸಿ.ಎಸ್.ಪಾಟೀಲ್ ಎ ಇ ಇ ಮಾತನಾಡಿ
ಪಟ್ಟಣದಲ್ಲಿ ಇತ್ತಿಚೆಗೆ ಹಲವು ಘಟನೆಗಳ ಬಗ್ಗೆ ನನಗೆ ಅರಿವಿದೆ, ಆರು ತಿಂಗಳಿಂದ ಪೆಮೆಂಟ್ ಇಲ್ಲ ಗುತ್ತಿಗೆದಾರರು ಸಮಸ್ಯೆ ಎದುರುಸುತ್ತಿದ್ದಾರೆ. ಕಾಮಗಾರಿ ಅಮೆಗತಿಯಲ್ಲಿ ಸಾಗಿದೆ ನಾನು ಒಪ್ಕೊತಿನಿ, ತ್ವರಿತಗತಿಯಲ್ಲಿ ಕಾಮಗಾರಿಯನ್ನು ಮಾಡಲು ಸೂಚಿಸುತ್ತೇನೆ ಸೋಮವಾರದಿಂದ ಡಾಂಬರ್ ಹಾಕಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುತ್ತೆನೆ ಎಂದು ಹೆಳಿದ್ದಾರೆ.
ಕಾರ್ಮಿಕ ಸಂಘದ ಅಧ್ಯಕ್ಷ ಅನ್ವರ್ ಪಾಷಾ ಮಾತನಾಡಿ
ಕಾಮಗಾರಿ ನಿಗದಿತ ಸಮಯದಲ್ಲಿ ಮುಗಿಸದೇ ವರ್ಷಗತಿಸಿದರೂ ಅರೆಬರೆ ಕಾಮಗಾರಿಗೆ ಸಾರ್ವಜನಿಕರು ಭಯಭೀತರಾಗಿದ್ದಾರೆ. ನಿತ್ಯ ಅನಾಹುತಗಳು ಹೆಚ್ಚಾಗಿದ್ದು. ನಾವುಗಳು ಹಲವು ಬಾರಿ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಮನವಿ ಮಾಡಿದರು ಯಾವುದೇ ಕ್ರಮ ಜರುಗಿಸದೇ ಇರುವುದು ವಿಪರ್ಯಾಸವಾಗಿದೆ ಅಧಿಕಾರಿಗಳು ಕೂಡಲೆ ಎಚ್ಚೆತ್ತು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಸಬೇಕು ಇಲ್ಲವಾದಲ್ಲಿ ಹೋರಾಟ ಕಚಿತ ಎಂದು ಎಚ್ಚರಿಸಿರು.
ರಿಪೋರ್ಟರ್ ಮೆಹಬೂಬ ಮೊಮೀನ.

