ಫೆ.27 ರಂದು ಜರುಗಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ-Kampli

ಫೆ.27 ರಂದು ಜರುಗಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನದ ಮೂಲಕ ಸರ್ಕಾರಕ್ಕೆ ಸರ್ಕಾರಿ ನೌಕರರ ಒಗ್ಗಟ್ಟನ್ನು ಪ್ರದರ್ಶಿಸಲಿದ್ದೇವೆ  ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಂಪ್ಲಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾದ ಎಚ್ ದೊಡ್ಡ ಬಸವರಾಜ್ ತಿಳಿಸಿದರು.

ಕಂಪ್ಲಿ ಪಟ್ಟಣದ ಸಂಘದ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಸಂಜೆ 6:30 ರ ಸುಮಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

 ಸರ್ಕಾರ ಸರ್ಕಾರಿ ನೌಕರರ ಹಳೆ ಪಿಂಚಣಿ ಯೋಜನೆ ಮರುಜಾರಿ ಮಾಡಬೇಕು, 7ನೇ ವೇತನ ಆಯೋಗದ ವರದಿಯ ಅನುಷ್ಠಾನಗೊಳಿಸಬೇಕು, ಅಲ್ಲದೆ ಆರೋಗ್ಯ ಸಂಜೀವಿನಿ ಯೋಜನೆ ಲೋಕಾರ್ಪಣೆ ಗೊಳಿಸಬೇಕು ಎಂದು ಒತ್ತಾಯಿಸಿದರು.

 ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ಬಸವರಾಜ್ ಖಜಾಂಚಿ ಕೆ ವಿರುಪಾಕ್ಷಿ ಉಪಾಧ್ಯಕ್ಷರಾದ ಕೆ ವೀರೇಶ್ ಬಿ ನಾಗರಾಜ್ ಸಹಕಾರ್ಯದರ್ಶಿಗಳಾದ ಶಿವಾನಂದ ಬೀರಲಿಂಗಪ್ಪ ಪ್ರಮುಖರಾದ ಜಂಬುನಾಥ್ ಸುರೇಶ್ ಭಂಡಾರಿ ಶಿವಾನಂದ್ ಪ್ರಕಾಶ್ ಗೌಡ ಸೇರಿದಂತೆ ಅನೇಕರಿದರು.

News and Ads : 6360633266 (Raghuveer, Siddi TV, Kampli)




Previous Post Next Post

Contact Form

f="https://unpkg.com/video.js/dist/video-js.css" rel="stylesheet">