Yalaburga : ಪದವೀಧರರ ಮತ ಕೇಳುವ ನೈತಿಕತೆ ಕೆಳೆದುಕೊಂಡಿರುವ ಕಾಂಗ್ರೆಸ್ : ಪಾಟೀಲ್ ಆರೋಪ


ಕೊಪ್ಪಳ. ಯಲಬುರ್ಗಾ : 

ಈಶಾನ್ಯ ಪದವೀಧರ ಚುನಾವಣೆ ನಿಮಿತ್ತ ಬಿಜೆಪಿ ಅಭ್ಯರ್ಥಿ ಅಮರ್ ನಾಥ್ ಪಾಟೀಲ್ ಪ್ರಚಾರ ಸಭೆ.

ಪದವೀಧರರ ಮತ ಕೇಳುವ ನೈತಿಕತೆ ಕೆಳೆದುಕೊಂಡಿರುವ ಕಾಂಗ್ರೆಸ್  : ಪಾಟೀಲ್ ಆರೋಪ 

ಈ ಹಿಂದಿನ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಎಲ್ಲಾ ನಿರುದ್ಯೋಗಿ ಪದವೀಧರರಿಗೆ ಯುವ ನಿಧಿ ಹಣ ಕೊಡುತ್ತೇವೆ ಎಂದು ವಾಗ್ವಾದ ಮಾಡಿದ್ದ ಕಾಂಗ್ರೆಸ್ ಪಕ್ಷ ಗೆದ್ದ ನಂತರ ಪದವೀಧರರಿಗೆ ಮೋಸ  ಮಾಡಿದೆ. ಕಾಂಗ್ರೆಸ್ ಪಕ್ಷ ಪದವೀಧರ ಮತ ಕೇಳುವ ನೈತಿಕತೆ ಕಳೆದುಕೊಂಡಿದೆ ಎಂದು ಈಶಾನ್ಯ ಪದವೀಧರ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರ್ ನಾಥ್ ಪಾಟೀಲ್ ಹೇಳಿದ್ದಾರೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರ ಚುನಾವಣೆ ಪ್ರಚಾರದ ಪೂರ್ವ ಬಾವಿ ಸಭೆ ನಡೆಸಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷವು ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಯುವಕರ, ಪದವೀಧರರ ಓಟು ಪಡೆದಿದೆ. ವಿದ್ಯಾನಿಧಿ ಎಲ್ಲಾ ಪದವೀಧರರಿಗೆ ಕೊಡುತ್ತೇವೆ ಎಂದು ಹೇಳಿ ಕೈ ಎತ್ತಿದೆ, ವಿದ್ಯಾನಿಧಿ ಜಾರಿಯಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷವು ಪದವೀಧರ ಮತದಾರರ ಓಟು ಕೇಳುವ ನೈತಿಕತೆ ಕಳೆದುಕೊಂಡಿದೆ. ಪದವೀಧರರು ಈ ಸಲ ಬಿಜೆಪಿ ಕಡೆ ವಾಲಿದ್ದು ಹೆಚ್ಚಿನ ಪ್ರಶಸ್ತ್ಯ ಮತಗಳನ್ನು ನೀಡಿ ಬಿಜೆಪಿ ಅಭ್ಯರ್ಥಿ ಯನ್ನು ಗೆಲ್ಲಿಸುತ್ತಾರೆ ಎಂದು ಅಮರ್ ನಾಥ್ ಪಾಟೀಲ್ ಹೇಳಿದರು.

371 ಜೆ ಸಮರ್ಪಕ ಅನುಷ್ಠಾನ, ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಮತ್ತು ಉದ್ಯೋಗಕ್ಕೆ ಹೆಚ್ಚು ಒತ್ತು ಕೊಡಬೇಕಿದ್ದು ಬಿಜೆಪಿ ಅಭ್ಯರ್ಥಿಯಾದ ತಮಗೆ ಮತ ನೀಡಿ ಗೆಲ್ಲಿಸಿ, ಈ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಿ ಎಂದು ಅಮರ್ ನಾಥ್ ಪಾಟೀಲ್ ಹೇಳಿದರು.

ಸಭೆಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಹಾಲಪ್ಪ ಆಚಾರ್, ಜಿಲ್ಲಾ ಅಧ್ಯಕ್ಷ ನವೀನ್ ಗುಳಗಣ್ಣನವರ್ ಅವರುಗಳು ಬಿಜೆಪಿ ಅಭ್ಯರ್ಥಿ ಗೆಲುವಿನ ಕಾರ್ಯತಂತ್ರದ ಬಗ್ಗೆ ಕಾರ್ಯಕರ್ತರಿಗೆ ಮನವರಿಕೆ ಮಾಡಿದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಮಾರುತಿ ಗವರಾಳ್, ಮುಖಂಡರಾದ ಕೆ ಬಸವರಾಜ್, ಬಸಲಿಂಗಪ್ಪ ಬೂತೆ, ಸಿ ಎಸ್ ಪೊಲೀಸ್ ಪಾಟೀಲ್, ವೀರಣ್ಣ ಹುಬ್ಬಳ್ಳಿ, ಅರುಣ್ ಶಹಾಪುರ, ಮಹೇಶ್ವರ ಸ್ವಾಮಿ, ಚಂದ್ರಶೇಖರ ಪಾಟೀಲ್ ಇತರರು ಉಪಸ್ಥಿತರಿದ್ದರು.

Previous Post Next Post

AD

 


Siddi TV

Contact Form

f="https://unpkg.com/video.js/dist/video-js.css" rel="stylesheet">