Doddaballapura : ದುರ್ಗೇನಹಳ್ಳಿ ಗ್ರಾಮದಲ್ಲಿ ಬಾರಿ ಮಳೆ: ವಿದ್ಯುತ್ ಕಂಬಗಳು ನೆಲಕ್ಕೆ, ಸಂಪರ್ಕ ಕಡಿತ


ದುರ್ಗೇನಹಳ್ಳಿ ಗ್ರಾಮದಲ್ಲಿ ಬಾರಿ ಮಳೆ: ವಿದ್ಯುತ್ ಕಂಬಗಳು ನೆಲಕ್ಕೆ, ಸಂಪರ್ಕ ಕಡಿತ

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ, ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುರ್ಗೇನಹಳ್ಳಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಸುರಿದ ಬಾರಿ ಮಳೆಗೆ 3 ರಿಂದ 4 ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದೆ ಕಳೆದ ಎರಡು ಮೂರು ದಿನಗಳಿಂದ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಇದರ ಸಂಬಂಧ ಈ ಮಾಹಿತಿಯನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಲಾಗಿದೆ ಇಲ್ಲಿಯವರೆಗೂ ಅವರಿಂದ ಯಾವುದೇ ಕ್ರಮ ಕೈಗೊಂಡಿಲ್ಲ.

ನಾವು ಬೆಸ್ಕಾಂ ಇಲಾಖೆಯ 1912 ಸಂಖ್ಯೆಗೆ ಕರೆ ಮಾಡಿ ದೂರನ್ನು ದಾಖಲಿಸಿದ್ದೇವೆ, ಆದರೂ ಸಹ ಮೂರು ದಿನಗಳಿಂದ ಅವರಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಕರೆ ಮಾಡಿದಾಗಲೆಲ್ಲ ಹಾರಿಕೆ ಉತ್ತರವನ್ನು ನೀಡುತ್ತಿದ್ದಾರೆ ಈ ಸಂದರ್ಭದಲ್ಲಿ ಊರಿನ ಯುವ ಮುಖಂಡ ಮಂಜುನಾಥ್ ಮಾತನಾಡಿ ಈ ಸಮಸ್ಯೆ ಬಗ್ಗೆ ನಾವು ಬೆಸ್ಕಾಂ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿಗೆ ಮಾಹಿತಿ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಈ ಸಮಯದಲ್ಲಿ ಊರಿನ ಗ್ರಾಮಸ್ಥರು ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು

ಈ ಸಂದರ್ಭದಲ್ಲಿ ಸುಗ್ರೀವಪ್ಪ, ಧನುಷ್ ,ಶ್ರೀನಿವಾಸ್, ವಸಂತ್ ಕುಮಾರ್, ಪೃಥ್ವಿ ಊರಿನ ಗ್ರಾಮಸ್ಥರು ಹಿರಿಯರು ಉಪಸ್ಥಿತರಿದ್ದರು.

ಶಿವಕುಮಾರ್, ಸಿದ್ದಿ ಟಿವಿ, ದೊಡ್ಡಬಳ್ಳಾಪುರ

Previous Post Next Post

AD

 


Siddi TV

Contact Form

f="https://unpkg.com/video.js/dist/video-js.css" rel="stylesheet">