Kampli: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಗೆ ಹೊಸದಾಗಿ 1006 ಸದಸ್ಯರು ಸೇರ್ಪಡೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಗೆ ಹೊಸದಾಗಿ 1006 ಸದಸ್ಯರು ಸೇರ್ಪಡೆ

ಕಂಪ್ಲಿ:

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕಂಪ್ಲಿ ತಾಲೂಕಿನಲ್ಲಿ ಸುಮಾರು 11 ವರ್ಷಗಳಿಂದ ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, ಈವರೆಗೆ ಒಟ್ಟು 2593 ಸ್ವಸಹಾಯ ತಂಡಗಳನ್ನು ರಚಿಸಿ, 22913 ಸದಸ್ಯರಿಗೆ ಆರ್ಥಿಕ ಸೌಲಭ್ಯವನ್ನು ಒದಗಿಸಿರುವ ಸಂಸ್ಥೆಯು ಇತ್ತೀಚೆಗೆ ಮತ್ತೊಂದು ಮಹತ್ವದ ಸಾಧನೆಗೈದಿದೆ.

ಪ್ರಸ್ತುತ ಆರ್ಥಿಕ ವರ್ಷದ ಜುಲೈ ತಿಂಗಳಲ್ಲಿ ಸಂಸ್ಥೆಯು 1006 ಹೊಸ ಸದಸ್ಯರನ್ನು ಸ್ವಸಹಾಯ ತಂಡಗಳಲ್ಲಿ ಸೇರಿಸುವುದರಲ್ಲಿ ಯಶಸ್ವಿಯಾಗಿದೆ. ಈ ಸೇರ್ಪಡೆ ಅಭಿಯಾನವು ಯೋಜನೆಯ ಎಲ್ಲ ವಿಭಾಗಗಳಲ್ಲಿ ಚುರುಕಿನ ಚಟುವಟಿಕೆಗಳಿಗೆ ನಾಂದಿಯಾಗಿದೆ.

ಇದೇ ಹಿನ್ನೆಲೆಯಲ್ಲಿ ಜುಲೈ 28ರಂದು ಬಳ್ಳಾರಿ ಜಿಲ್ಲಾ ನಿರ್ದೇಶಕರಾದ ರೋಹಿತಾಕ್ಷ ಅವರ ಅಧ್ಯಕ್ಷತೆಯಲ್ಲಿ ಕಂಪ್ಲಿಯ ಯೋಜನಾ ಮೇಲ್ವಿಚಾರಕರ ಸಭೆ ನಡೆಯಿತು. ಸಭೆಯಲ್ಲಿ ಅವರು ಈ ಅಭಿಯಾನವನ್ನು ಉಲ್ಲೇಖಿಸಿ ಸಂತೋಷ ವ್ಯಕ್ತಪಡಿಸಿ, ಯಶಸ್ವಿಯಾಗಿ 1006 ಸದಸ್ಯರನ್ನು ಸೇರ್ಪಡೆಗೊಳಿಸಿರುವ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಿದರು.

ಅವರು ಯೋಜನೆಯ ವಿವಿಧ ಸೌಲಭ್ಯಗಳು, CSC (Common Service Center) ಕಾರ್ಯಕ್ರಮಗಳು, ಕೃಷಿ ಪ್ರೋತ್ಸಾಹನಾ ಯೋಜನೆಗಳ ಕುರಿತು ಸದ್ರಿ ಸದಸ್ಯರಿಗೆ ಸರಿಯಾದ ಮಾಹಿತಿ ನೀಡಬೇಕು ಹಾಗೂ ಜನರನ್ನು ಯೋಜನೆಯ ಪ್ರಮುಖ ಪ್ರವಾಹಕ್ಕೆ ತರಬೇಕು ಎಂಬುದಾಗಿ ಮಾರ್ಗದರ್ಶನ ನೀಡಿದರು.

ಸಭೆಯಲ್ಲಿ ಯೋಜನಾಧಿಕಾರಿಯಾದ ರಾಘವೇಂದ್ರ ಅವರು ಜಿಲ್ಲಾ ನಿರ್ದೇಶಕರಿಗೆ ಸೇರ್ಪಡೆ ದಾಖಲೆಗಳನ್ನು ಹಸ್ತಾಂತರ ಮಾಡಿದರು. ಜೊತೆಗೆ, ಕೃಷಿ ಅಧಿಕಾರಿ ಸಂಜುಕುಮಾರ್, ವಿಚಕ್ಷಣಾಧಿಕಾರಿ ಶ್ರೀಶೈಲ, ಹಣಕಾಸು ಪ್ರಬಂಧಕ ಮುರಗೇಶ್ ಹಾಗೂ ಮೇಲ್ವಿಚಾರಕರಾದ ರಾಜು, ಪ್ರಭು, ಮಂಜುನಾಥ್, ಮಂಜುಳಾ, ಜಯಲಕ್ಷ್ಮಿ, ಅವಿನಾಶ್, ಮಹಾಂತೇಶ್, ವೀರಯ್ಯ ಉಪಸ್ಥಿತರಿದ್ದರು.

— ಸಿದ್ದಿ ಟಿವಿ ವಾರ್ತೆ

Previous Post Next Post

Contact Form

f="https://unpkg.com/video.js/dist/video-js.css" rel="stylesheet">