Kampli: ಬಸವಣ್ಣನವರ ವಚನ ಸಾಹಿತ್ಯ ಎಲ್ಲರಿಗೂ ತಿಳಿಯಬೇಕು: ಪಂಪಾಪತಿ.ಹೆಚ್.


ಬಸವಣ್ಣನವರ ವಚನ ಸಾಹಿತ್ಯ ಎಲ್ಲರಿಗೂ ತಿಳಿಯಬೇಕು: ಪಂಪಾಪತಿ.ಹೆಚ್.

ಸ್ಥಳ: ಕಂಪ್ಲಿ | ದಿನಾಂಕ: ಜುಲೈ 27 | ವರದಿ: ಸಿದ್ದಿ ಟಿವಿ

ಬಸವಪರ ಸಂಘಟನೆಗಳ ಆಶ್ರಯದಲ್ಲಿ ಗಂಗಾವತಿಯಲ್ಲಿ ಜುಲೈ 27 ರಂದು ನಡೆದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಕಾಯಕಯೋಗಿ, ಭಕ್ತಿಭಂಡಾರಿ ಬಸವಣ್ಣನವರ ವಚನಗಳ ಕುರಿತು ಪಂಪಾಪತಿ. ಹೆಚ್., ಎಮ್ಮಿಗನೂರು ಶಿಕ್ಷಕರು ಉಪನ್ಯಾಸ ನೀಡಿದರು.

"ಇಡಿ ಜಗತ್ತು ಗೌರವಿಸುವ ಹಾಗೂ ಎಲ್ಲಾ ಜನಾಂಗದವರು ಒಪ್ಪಿಕೊಳ್ಳುವ ಮಹಾನ್ ಕನ್ನಡದ ವಚನಕಾರರೆಂದರೆ 12ನೇ ಶತಮಾನದ ಸಾಮಾಜಿಕ ಹರಿಕಾರ ಜಗಜ್ಯೋತಿ ಬಸವಣ್ಣನವರು," ಎಂದು ಅವರು ಅಭಿಪ್ರಾಯಪಟ್ಟರು.

ಅವರು ಸಮಾಜದಲ್ಲಿದ್ದ ಗೊಡ್ಡು ಸಂಪ್ರದಾಯಗಳನ್ನು ಪ್ರಶ್ನಿಸಿ, ಜಾತ್ಯಾತೀತ ಸಮಾಜದ ಕಲ್ಪನೆಯೊಂದಿಗೆ ಮಾತನಾಡಿದ್ದು, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಮಾನವೀಯ ಸಂಘರ್ಷಗಳನ್ನು ತೀವ್ರವಾಗಿ ಪ್ರಶ್ನಿಸಿದ್ದರು.

ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯ
ಇವನಮ್ಮವ ಇವನಮ್ಮವನೆಂದೆನಿಸಯ್ಯ

ಈ ವಚನದ ಮೂಲಕ ಬಸವಣ್ಣನವರು ಮಾನವೀಯತೆಯ ಮಹತ್ವವನ್ನು ವಿಶ್ವದ ಮುಂದೆ ಮಂಡಿಸಿದ್ದಾರೆ. ಎಲ್ಲಾ ಜನಾಂಗದವರಿಗೂ ಪ್ರೀತಿ, ಸಹಿಷ್ಣುತೆ, ಮತ್ತು ಸಮಾನತೆಯ ದೃಷ್ಟಿಕೋಣ ಬೋಧಿಸುವ ಸಂದೇಶ ಇದಾಗಿದೆ.

"ಇಂದಿನ ಯುವಕರು ಬಸವಣ್ಣನವರ ಹೋರಾಟವನ್ನು ತಿಳಿದುಕೊಳ್ಳಬೇಕು. ಮೂಡನಂಬಿಕೆ, ಕಂದಾಚಾರ, ಅಸಮಾನತೆ ಮತ್ತು ಪಕ್ಷಪಾತದ ವಿರುದ್ಧ ನಡೆಸಿದ ಸಾಮಾಜಿಕ ಕ್ರಾಂತಿ ಇಂದಿನ ಪೀಳಿಗೆಗೆ ದಾರಿ ತೋರಿಸುತ್ತದೆ," ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಹಾಂತೇಶ ಪಟ್ಟಣಶೆಟ್ಟಿ, ಶ್ರೀಮತಿ ನಾಗರತ್ನ ಪಟ್ಟಣಶೆಟ್ಟಿ ಹಾಗೂ ವಿವಿಧ ಬಸವಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಅನುಯಾಯಿಗಳು ಭಾಗವಹಿಸಿದ್ದರು.


– ಸಿದ್ದಿ ಟಿವಿ ವಾರ್ತೆ

Previous Post Next Post

Contact Form

f="https://unpkg.com/video.js/dist/video-js.css" rel="stylesheet">