Kampli: ಗ್ರಾಮ ಪಂಚಾಯತಿ ಕಾರ್ಯದರ್ಶಿ ವೀರಭದ್ರಯ್ಯ ಅವರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹ

 

 ಗ್ರಾಮ ಪಂಚಾಯತಿ ಕಾರ್ಯದರ್ಶಿ ವೀರಭದ್ರಯ್ಯ ಅವರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹ

ಡಾ. ಬಿ.ಆರ್. ಅಂಬೇಡ್ಕರ್ ದಲಿತ ಸಂಘದ ಕಾರ್ಯದರ್ಶಿ ದೊಡ್ಡ ಬಸವರಾಜ್ ಬಡಗಿ

ದಿನಾಂಕ: 27 ಜುಲೈ 2025 | ಸ್ಥಳ: ಮುದ್ದಾಪುರ

ಕಂಪ್ಲಿ : ನಂ.10 ಮುದ್ದಾಪುರ ಗ್ರಾಮ ಪಂಚಾಯತಿಯಲ್ಲಿ ಐದು ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿರುವ ಗ್ರಾಮ ಪಂಚಾಯತಿ ಕಾರ್ಯದರ್ಶಿ ವೀರಭದ್ರಯ್ಯ ಅವರನ್ನು ಸರ್ಕಾರದ ನಿಯಮದಂತೆ ಕಡ್ಡಾಯವಾಗಿ ವರ್ಗಾವಣೆ ಮಾಡಬೇಕೆಂದು ಡಾ. ಬಿ.ಆರ್. ಅಂಬೇಡ್ಕರ್ ದಲಿತ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಈ ಕುರಿತು ಸಂಘದ ಅಧ್ಯಕ್ಷ ಕೆ. ರಾಮಕೃಷ್ಣ ಹಾಗೂ ಕಾರ್ಯದರ್ಶಿ ದೊಡ್ಡ ಬಸವರಾಜ್ ಬಡಗಿ ಅವರು 27.07.2025 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅವರು ಹೇಳಿದರು: “ಕರ್ನಾಟಕ ರಾಜ್ಯಪಾಲರ ಆದೇಶ ಮತ್ತು ಅವರ ಹೆಸರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರಾದ ಡಾ. ಎನ್. ಸೋಮೇಶ್ ಕುಮಾರ್ ನಿರ್ದೇಶನದಂತೆ, ಐದು ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನು ಬೇರೆ ಕಡೆ ಕಡ್ಡಾಯವಾಗಿ ವರ್ಗಾವಣೆ ಮಾಡಬೇಕಾಗಿದೆ.”

2024ರಲ್ಲಿ ಜಾರಿಗೆ ಬಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ತಿದ್ದುಪಡಿ ನಿಯಮಗಳು ಈ ವಿಷಯಕ್ಕೆ ಆಧಾರವಾಗಿದ್ದು, ಈಗಲೂ ವೀರಭದ್ರಯ್ಯ ಅವರು ಒಂದೇ ಹುದ್ದೆಯಲ್ಲಿ ಸೇವೆ ನೀಡುತ್ತಿರುವುದರಿಂದ, ಸರ್ಕಾರದ ಆದೇಶವನ್ನು ಪಾಲಿಸಲು ಅವರು ಸ್ಥಳಾಂತರಗೊಳ್ಳಬೇಕೆಂದು ಸಂಘದ ವತಿಯಿಂದ ಒತ್ತಾಯಿಸಲಾಯಿತು.

ಸಂಘದ ಪದಾಧಿಕಾರಿಗಳು ಸಂಬಂಧಪಟ್ಟ ಮೆಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿ, ಈ ಕ್ರಮ ಜನಹಿತದ ದೃಷ್ಟಿಯಿಂದ ಅತ್ಯಂತ ಅಗತ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಾಜರಿದ್ದವರು:

  • ಕೆ. ರಾಮಕೃಷ್ಣ – ಸಂಘದ ಅಧ್ಯಕ್ಷ, ನಬೀ ಸಾಬ್ – ಉಪಾಧ್ಯಕ್ಷ, ದೊಡ್ಡ ಬಸವರಾಜ್ ಬಡಗಿ – ಕಾರ್ಯದರ್ಶಿ, ನಾಯಕರ ನಾಗರಾಜ್ – ಸಂಘಟನಾ ಕಾರ್ಯದರ್ಶಿ, ಬಡಿಗೆ ಓಂಕಾರಿ, ಹರಿಜನ ವೆಂಕಟೇಶ್ಹ, ಹರಿಜನ ರೇಣುಕಪ್ಪ, ಪಲ್ಲಕ್ಕಿ ವೆಂಕಟೇಶ್ಹ, ಹರಿಜನ ಹುಲ್ಗಪ್ಪ, ಪಲ್ಲಕ್ಕಿ ಪರಶುರಾಮ, ಹರಿಜನ ಮಲ್ಲಿಕಾರ್ಜುನ, ರಿಯಾಜ್ ಇದ್ದರು.

 ವರದಿ:ಸಿದ್ದಿ ಟಿವಿ | www.sidditv.com | 6360633266

Previous Post Next Post

Contact Form

f="https://unpkg.com/video.js/dist/video-js.css" rel="stylesheet">