ಶಿಕ್ಷಕ ಎಸ್ ರಾಮಪ್ಪ ಗೌರವ ಸನ್ಮಾನ
ಚಿತ್ರದುರ್ಗ, ಸೋಮವಾರ
12ನೇ ವರ್ಷದ ರಕ್ಷಾಬಂಧನ ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸೋಮವಾರ ಚಿತ್ರದುರ್ಗದ ಜಿಲ್ಲಾ ಕುರುಬರ ವಿದ್ಯಾರ್ಥಿನಿಲಯದಲ್ಲಿ ಜರುಗಿತು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಕುರುಬರ ಸಂಘ ಹಾಗೂ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಇವರ ಸಂಯುಕ್ತ ಆಶಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಎಮ್ಮಿಗನೂರು ಗ್ರಾಮದ ಸರ್ಕಾರಿ ಶತಮಾನ ಶಾಲೆಯ ಗೌರವ ಶಿಕ್ಷಕ ಹಾಗೂ ಸಂಪನ್ಮೂಲ ವ್ಯಕ್ತಿ ಎಸ್. ರಾಮಪ್ಪ ಅವರ ಶಿಕ್ಷಣ ಸೇವೆಯನ್ನು ಗುರುತಿಸಿ ಹಾಸ್ಯ ಸಾಹಿತಿ ಜಗನ್ನಾಥ್ ಅವರು “ಶಿಕ್ಷಕ ಆಪ್ತಮಿತ್ರ” ಶೀರ್ಷಿಕೆಯ ಕವನದ ಭಾವಚಿತ್ರ ನೀಡಿ ಗೌರವಿಸಿದರು.
“ಶಿಕ್ಷಣ ಸೇವೆ ಅತಿ ದೊಡ್ಡ ಸಮಾಜಮುಖಿ ಕಾರ್ಯ. ಅದನ್ನು ಗುರುತಿಸಿ ಗೌರವಿಸುವುದು, ಮುಂದಿನ ತಲೆಮಾರಿಗೂ ಪ್ರೇರಣೆ” — ಹಾಸ್ಯ ಸಾಹಿತಿ ಜಗನ್ನಾಥ್
ಈ ಸಂದರ್ಭದಲ್ಲಿ ಚೆನ್ನಗಿರಿಯ ಕೇದಾರಲಿಂಗ ಶಿವಶಾಂತ ವೀರ ಶಿವಾಚಾರ್ಯರು, ಸಾಹಿತಿ ಜಾದು ಮೋಹನ್ ಕುಮಾರ್, ನವೀನ್ ಸಜ್ಜನ್, ಮಹಾಂತೇಶ್ ಶಾಸ್ತ್ರಿ ಹಿರೇಮಠ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.