Kampli : ಕಸ ಕಂಡರೆ ವಾಟ್ಸಪ್ ಮಾಡಿ : ನಗರದಲ್ಲಿ ಕಸ ನಿವಾರಣೆಗೆ ಕಂಪ್ಲಿ ಪುರಸಭೆಯ ವಿಭಿನ್ನ ಪ್ರಯತ್ನ

ಕಸ ಕಂಡರೆ ವಾಟ್ಸಪ್ ಮಾಡಿ : ನಗರದಲ್ಲಿ ಕಸ ನಿವಾರಣೆಗೆ ಕಂಪ್ಲಿ ಪುರಸಭೆಯ ವಿಭಿನ್ನ ಪ್ರಯತ್ನ

ಕಂಪ್ಲಿ, ಆಗಸ್ಟ್ 13:

ನಗರದಲ್ಲಿ ದಿನೇ ದಿನೇ ವ್ಯಾಪಾರ, ಅಂಗಡಿ–ಮಳಿಗೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಸದ ಪ್ರಮಾಣವೂ ಹೆಚ್ಚುತ್ತಿದೆ. ಈ ಸಮಸ್ಯೆಯನ್ನು ಶೀಘ್ರ ಪರಿಹರಿಸಲು ಕಂಪ್ಲಿ ಪುರಸಭೆ ವಿಭಿನ್ನ ಹೆಜ್ಜೆ ಇಟ್ಟಿದೆ.

 ಪುರಸಭೆ ಕಚೇರಿ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಅವರು ಮಾತನಾಡಿ, “ನಗರದ ಯಾವೆಡೆ ಕಸದ ರಾಶಿ ಕಂಡರೂ ವಿಳಾಸದೊಂದಿಗೆ ಫೋಟೋವನ್ನು ವಾಟ್ಸಪ್ ಮೂಲಕ ಕಳುಹಿಸಿದರೆ, ಪುರಸಭೆ 48 ಗಂಟೆಗಳೊಳಗೆ ಕಸವನ್ನು ತೆರವುಗೊಳಿಸುತ್ತದೆ” ಎಂದು ತಿಳಿಸಿದರು.


ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ, ಸ್ಥಾಯಿ ಸಮಿತಿಯ ಅಧ್ಯಕ್ಷ ಉಸ್ಮಾನ್, ಪುರಸಭೆಯ ಪ್ರಶಾಂತ್, ಪ್ರಕಾಶ್, ಪುರಸಭೆ ಸದಸ್ಯರು, ಸಿಬ್ಬಂದಿಗಳು, ಹಾಗೂ ಪೌರ ಕಾರ್ಮಿಕರು ಹಾಗೂ ಸಾರ್ವಜನಿಕರು ಈ ಸಂದರ್ಭದಲ್ಲಿ ಹಾಜರಿದ್ದರು. ಈ ಹೆಜ್ಜೆಯಿಂದ ಕಸದ ಸಮಸ್ಯೆಗೆ ವೇಗವಾಗಿ ಪರಿಹಾರ ದೊರೆಯುವ ನಿರೀಕ್ಷೆಯಿದೆ.


Previous Post Next Post

Contact Form

f="https://unpkg.com/video.js/dist/video-js.css" rel="stylesheet">