ಜೆಸಿಐ ಕಂಪ್ಲಿ ಸೋನಾ ವತಿಯಿಂದ ಪಲ್ಸ್ ಪೋಲಿಯೋ ಬೂತ್ ಉದ್ಘಾಟನೆ: 193 ಮಕ್ಕಳಿಗೆ ಲಸಿಕೆ
ಕಂಪ್ಲಿ: ರಾಷ್ಟ್ರೀಯ ಪಲ್ಸ್ ಪೋಲಿಯೋ ರೋಗನಿರೋಧಕ ದಿನಾಚರಣೆಯ ಅಂಗವಾಗಿ, ಎಸ್.ಎನ್. ಪೇಟೆಯ ಶ್ರೀ ವೀರಬ್ರಹ್ಮೇಂದ್ರ ಸ್ವಾಮಿ ಪಾಲಿಕ್ಲಿನಿಕ್ ಸಮೀಪ ಜೆಸಿಐ ಕಂಪ್ಲಿ ಸೋನಾ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಬೂತ್ (ಲಸಿಕಾ ಕೇಂದ್ರ) ಉದ್ಘಾಟನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಹಿರಿಯ ಜೆಸಿ ಹಾಗೂ ಪೂರ್ವಾಧ್ಯಕ್ಷರಾದ ಜೆಸಿ ಹೇಮಯ್ಯ ಸ್ವಾಮಿ ಅವರು ಬೂತ್‌ಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಜೆಸಿ ಡಾ. ಭರತ್ ಪದ್ಮಶಾಲಿ, ಜೆಸಿ ಡಾ. ಸುಧಾಕರ್, ಜೆಸಿ ಡಾ. ಶ್ರದ್ಧಾ ಭರತ್, ಅರುಂಧತಿ ಸುಧಾಕರ್, ಜೆಸಿ ಚಂದ್ರಶೇಖರ್ ಗೌಡ, ಜೆಸಿ ರಮೇಶ್ ಬೆಲಂಕಾರ್, ಜೆಸಿ ರಾಕೇಶ್ ಬಾಗ್ರೇಚಾ, ಜೆಸಿ ಜೀಲನ್ ಸಾಬ್, ಜೆಸಿ ಭರತ್ ಡಿ., ಜೆಸಿ ಪೂಜಾ ಭರತ್, ಜೆಸಿ ಇಮ್ತಿಯಾಜ್, ಜೆಸಿ ವೆಂಕಟ ಸಪ್ತಗಿರಿ, ಜೆಸಿ ಗುರುಶಾಂತ ಶಾಸ್ತ್ರಿ, ಜೆಸಿ ಮನೋಜ್ ದಾನಪ್ಪ, ಜೆಸಿ ರಮೇಶ್, ಜೆಸಿ ಅಕ್ಕಿ ಜೀಲನ್, ಜೆಸಿ ಸೋಹೇಲ್, ಜೆಸಿ ಮಾನಸ, ಜೆಸಿ ಪವಿತ್ರ, ಸುಮನ್ ಪದ್ಮಶಾಲಿ, ಜಯಮ್ಮ ಹಾಗೂ ಮಂಜುನಾಥ ಉಪಸ್ಥಿತರಿದ್ದರು.
ಇಂದು ನಡೆದ ಲಸಿಕಾ ಶಿಬಿರದಲ್ಲಿ ಒಟ್ಟು 193 ಮಕ್ಕಳು ಪೋಲಿಯೋ ಲಸಿಕೆ ಪಡೆದು ಪ್ರಯೋಜನ ಪಡೆದರು. ನಾಳೆಯಿಂದ ಇನ್ನೂ ಮುಂದಿನ ಎರಡು ದಿನಗಳವರೆಗೆ ಶ್ರೀ ವೀರಬ್ರಹ್ಮೇಂದ್ರ ಸ್ವಾಮಿ ಪಾಲಿಕ್ಲಿನಿಕ್‌ನಲ್ಲಿ ಪೋಲಿಯೋ ಲಸಿಕೆ ಲಭ್ಯವಿದ್ದು, ಪೋಷಕರು ತಮ್ಮ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿ ಹಾಕಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
