Kampli : ದಲಿತ ಮುಖಂಡ, ಮಾಜಿ ಪುರಸಭೆ ಸದಸ್ಯ ಎಂ.ಸಿ. ಮಾಯಪ್ಪ ನಿಧನ-Siddi TV

 

ಕಂಪ್ಲಿ: ದಲಿತ ಮುಖಂಡ, ಮಾಜಿ ಪುರಸಭೆ ಸದಸ್ಯ ಎಂ.ಸಿ. ಮಾಯಪ್ಪ ನಿಧನ

ಕಂಪ್ಲಿ

ಕಂಪ್ಲಿ ನಗರದ ದಲಿತ ಮುಖಂಡ ಹಾಗೂ ಮಾಜಿ ಪುರಸಭೆ ಸದಸ್ಯರಾದ ಎಂ.ಸಿ. ಮಾಯಪ್ಪ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸಾಮಾಜಿಕ ಹಾಗೂ ದಲಿತಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮಾಯಪ್ಪ ಅವರು, ಛಲವಾದಿ ಸಮಾಜದ ಹಿರಿಯ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಇವರು ಛಲವಾದಿ ಮಹಾಸಭಾದ ಕಲ್ಯಾಣ ಕರ್ನಾಟಕ ಅಧ್ಯಕ್ಷರಾಗಿ   ಸಮಾಜದ ಏಳಿಗೆ ಹಾಗೂ ಸಮುದಾಯದ ಹಿತಕ್ಕಾಗಿ ಶ್ರಮಿಸುತ್ತಿದ್ದ ಅವರು, ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು.

ಅವರ ನಿಧನದಿಂದ ಕಂಪ್ಲಿ ನಗರದ ಸಾಮಾಜಿಕ ಹಾಗೂ ದಲಿತಪರ ಹೋರಾಟದ ವಲಯದಲ್ಲಿ ದುಃಖದ ಛಾಯೆ ಆವರಿಸಿದೆ. ಅವರ ಅಗಲಿಕೆಗೆ ವಿವಿಧ ಗಣ್ಯರು, ಸಮಾಜದ ಮುಖಂಡರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಭಾವಪೂರ್ಣ ಶ್ರದ್ಧಾಂಜಲಿ

ಮಾಜಿ ಪುರಸಭೆ ಸದಸ್ಯ ಹಾಗೂ ದಲಿತ ಮುಖಂಡ ಎಂ.ಸಿ. ಮಾಯಪ್ಪ ಅವರ ನಿಧನಕ್ಕೆ ಛಲವಾದಿ ಸಮಾಜದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">