Kampli : ಮಾಜಿ ಶಾಸಕ ಟಿ.ಹೆಚ್. ಸುರೇಶ್ ಬಾಬು ಜನ್ಮದಿನ: ವಿದ್ಯಾರ್ಥಿಗಳಿಗೆ ಪ್ಲೇಟ್, ಗ್ಲಾಸ್ ವಿತರಣೆ


ಮಾಜಿ ಶಾಸಕ ಟಿ.ಹೆಚ್. ಸುರೇಶ್ ಬಾಬು ಜನ್ಮದಿನ: ವಿದ್ಯಾರ್ಥಿಗಳಿಗೆ ಪ್ಲೇಟ್, ಗ್ಲಾಸ್ ವಿತರಣೆ

ಬಳ್ಳಾರಿ / ಕಂಪ್ಲಿ: ಕಂಪ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಟಿ.ಹೆಚ್. ಸುರೇಶ್ ಬಾಬು ಅವರ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.

ಈ ಸಂದರ್ಭದಲ್ಲಿ ಕಂಪ್ಲಿ ಪಟ್ಟಣದ 4ನೇ ವಾರ್ಡ್‌ನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಊಟದ ಪ್ಲೇಟ್ ಹಾಗೂ ಗ್ಲಾಸ್‌ಗಳನ್ನು ವಿತರಿಸಲಾಯಿತು. ಬಳಿಕ 3ನೇ ವಾರ್ಡ್‌ನ ಅಂಗನವಾಡಿ ಕೇಂದ್ರದ ಮಕ್ಕಳಿಗೂ ಪ್ಲೇಟ್ ಮತ್ತು ಗ್ಲಾಸ್ ವಿತರಿಸಿ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಕಾರ್ಯಕ್ರಮದಲ್ಲಿ ದುರ್ಗೇಶ್, ಸೀನಾ, ಲೋಹಿತ್, ಶುಂಭು, ರಾಜಶೇಖರ, ಹನುಮಂತ, ಸೂರಿ, ಜಡೇಶ ಸೇರಿದಂತೆ ಅನೇಕ ಅಭಿಮಾನಿಗಳು ಭಾಗವಹಿಸಿದ್ದರು.

 

Previous Post Next Post

Contact Form

f="https://unpkg.com/video.js/dist/video-js.css" rel="stylesheet">