ಕಂಪ್ಲಿಯಲ್ಲಿ ರೈನ್ ಬೋ ಗ್ಲೋಬಲ್ ಸ್ಕೂಲ್ ವತಿಯಿಂದ ಮಾಲಿನ್ಯ ಮುಕ್ತ ದೀಪಾವಳಿ ಜಾಗೃತಿ ಜಾಥಾ
ಕಂಪ್ಲಿ: ಪಟ್ಟಣದ ಕೆಸಿಬಿ ಎಜುಕೇಶನ್ ಟ್ರಸ್ಟ್‌ನ ರೈನ್ ಬೋ ಗ್ಲೋಬಲ್ ಸ್ಕೂಲ್ ವತಿಯಿಂದ ಮಾಲಿನ್ಯ ಮುಕ್ತ ದೀಪಾವಳಿ ಆಚರಣೆ ಕುರಿತು ಜಾಗೃತಿ ಜಾಥಾ ಆಯೋಜಿಸಲಾಗಿತ್ತು.
ನಗರದ ಸರ್ಕಾರಿ ಆಸ್ಪತ್ರೆಯಿಂದ ಆರಂಭಗೊಂಡ ಜಾಥಾ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ವಿದ್ಯಾರ್ಥಿಗಳು ಜಾಗೃತಿ ಫಲಕಗಳನ್ನು ಹಿಡಿದು ಪಥಸಂಚಲನ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಮಾಲಿನ್ಯ ಮುಕ್ತ ದೀಪಾವಳಿ ಆಚರಣೆಯ ಕುರಿತು ಜಾಗೃತಿ ಮೂಡಿಸಿದರು.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ವಾಯು ಹಾಗೂ ಶಬ್ದ ಮಾಲಿನ್ಯ ಉಂಟಾಗುತ್ತದೆ. ಆದ್ದರಿಂದ ಪಟಾಕಿ ಸಿಡಿಸದೆ ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸುವಂತೆ ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್. ಚಾಂದ್ ಬಾಷಾ ತಿಳಿಸಿದರು.
**ಸಿದ್ದಿ ಟಿವಿ | ಕಂಪ್ಲಿ**
