Kampli : ಬೆಳಗೋಡು ಶ್ರೀ ಮುಂಜಿ ಬಸವೇಶ್ವರ ರಥೋತ್ಸವದಲ್ಲಿ ದಲಿತ ಮುಖಂಡರಿಗೆ ಜಾತಿ ನಿಂದನೆ ಆರೋಪ

ಬೆಳಗೋಡು ಶ್ರೀ ಮುಂಜಿ ಬಸವೇಶ್ವರ ರಥೋತ್ಸವದಲ್ಲಿ ದಲಿತ ಮುಖಂಡರಿಗೆ ಜಾತಿ ನಿಂದನೆ ಆರೋಪ : ಬೆಳಗೋಡು ಹಾಳ್ ಚಂದ್ರಶೇಖರ್ ಗೌಡ ವಿರುದ್ಧ SC/ST ಕಾಯ್ದೆಯಡಿ FIR ದಾಖಲು..!!

ಕಂಪ್ಲಿ, ಸೆಪ್ಟೆಂಬರ್ 03, 2026: ಅಗಸ್ಟ್ 31ರಂದು ಕಂಪ್ಲಿ ತಾಲೂಕಿನ ನಂ.05 ಬೆಳಗೊಡು ಹಾಳ್ ಗ್ರಾಮದಲ್ಲಿ ನಡೆದ ಶ್ರೀ ಮುಂಜಿ ಬಸವೇಶ್ವರ ಮಹಾ ರಥೋತ್ಸವದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ನನ್ನನ್ನು ಹಾಗೂ ಇತರ ದಲಿತ ಮುಖಂಡರನ್ನು ಜಾತಿಯ ಹೆಸರಿನಲ್ಲಿ ಸಾರ್ವಜನಿಕವಾಗಿ ಅವಮಾನಿಸಿ, ನಿಂದಿಸಿ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಪ್ರಶ್ನಿಸಿ ಅವಹೇಳನ ಮಾಡಿದ ದೂರಿನ ಹಿನ್ನೆಲೆಯಲ್ಲಿ ಚಂದ್ರಶೇಖರ್ ಗೌಡ ಅವರ ವಿರುದ್ಧ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶ್ರೀ ಮುಂಜಿ ಬಸವೇಶ್ವರ ಮಹಾ ರಥೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ನಾನು ಸೇರಿದಂತೆ ಗ್ರಾಮದ ವಿವಿಧ ಮುಖಂಡರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ  ಬೆಳಗೋಡು ಹಾಳ್ ದೊಡ್ಡ ಬಸವರಾಜ ಬಡಗಿ ಅವರ ನೇತೃತ್ವದಲ್ಲಿ ಮಾದಿಗ ಸಮಾಜದ ಮುಖಂಡರು ಹಾಗೂ ಮಾದಿಗ ಸಮಾಜದ ದಲಿತ ಯುವಕರು ಕೆಂಚಮ್ಮ ದೇವಸ್ಥಾನದ ಮುಂಭಾಗದಿಂದ ಮುಂಜಿಬಸವೇಶ್ವರ ದೇವಸ್ಥಾನದ ವರೆಗೆ ಹೂವಿನ ಹಾರ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿ ರಥೋತ್ಸವದಲ್ಲಿ ಸಹ ಪಾಲ್ಗೊಳ್ಳಲಾಗಿತ್ತು. ಆದರೆ, ಕಾರ್ಯಕ್ರಮದ ಸಂದರ್ಭದಲ್ಲಿ ಹಾಗೂ ನಂತರ ಎಸ್. ಚಂದ್ರಶೇಖರ್ ಗೌಡ ಅವರು ದಲಿತ ಮುಖಂಡರು ರಥೋತ್ಸವದಲ್ಲಿ ಭಾಗವಹಿಸಿರುವುದನ್ನು ಪ್ರಶ್ನಿಸಿ, ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದಲ್ಲಿ ದಲಿತರು ಭಾಗವಹಿಸಿರುವುದನ್ನು ಆಕ್ಷೇಪಿಸಿ, ಜಾತಿ ಆಧಾರಿತವಾಗಿ ಅವಮಾನಿಸುವ ಮತ್ತು ಸಾಮಾಜಿಕವಾಗಿ ಕೀಳಾಗಿ ಕಾಣಿಸುವ ರೀತಿಯಲ್ಲಿ ಸಾರ್ವಜನಿಕವಾಗಿ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದು ದೂರಿನಲ್ಲಿ ಬೆಳಗೋಡು ಹಾಳ್ ದೂರುದಾರರಾದ  ದೊಡ್ಡ ಬಸವರಾಜ ಬಡಗಿ ಅವರು ಉಲ್ಲೇಖಿಸಲಾಗಿದೆ.

ವಿಶೇಷವಾಗಿ, ದಲಿತ ಮುಖಂಡರನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿರುವುದು, ರಥೋತ್ಸವದಲ್ಲಿ ಭಾಗವಹಿಸಲು ಅವಕಾಶ ನೀಡಿರುವುದು ಹಾಗೂ ದಲಿತ ಮುಖಂಡರು ತಂದ ಹೂವಿನ ಹಾರವನ್ನು ರಥಕ್ಕೆ ಹಾಕಿರುವುದನ್ನು ಪ್ರಶ್ನಿಸಿ ಆಕ್ಷೇಪಾರ್ಹವಾಗಿ ಮಾತನಾಡಿರುವುದರಿಂದ, ಈ ಕೃತ್ಯವು ಪರಿಶಿಷ್ಟ ಜಾತಿಯ ವ್ಯಕ್ತಿಯ ಸಾಮಾಜಿಕ ಗೌರವ ಮತ್ತು ಮಾನ-ಮರ್ಯಾದೆಗೆ ಧಕ್ಕೆ ಉಂಟುಮಾಡಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಎಸ್. ಚಂದ್ರಶೇಖರ್ ಗೌಡ ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ತಡೆ) ಕಾಯ್ದೆ, 1989ರ ಅನ್ವಯಿಸುವ ಕಲಂಗಳ ಅಡಿಯಲ್ಲಿ ಕಲಂಗಳ ಅಡಿಯಲ್ಲಿ FIR ದಾಖಲಿಸಲಾಗಿದೆ. ಜಾತಿ ಆಧಾರಿತ ಅವಮಾನಕ್ಕೆ ಕಾನೂನಿನಡಿ ಕ್ರಮ ಅಗತ್ಯ ಧಾರ್ಮಿಕ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜಾತಿಯ ಆಧಾರದ ಮೇಲೆ ಯಾವುದೇ ವ್ಯಕ್ತಿಯನ್ನು ಅವಮಾನಿಸುವುದು, ಸಾಮಾಜಿಕವಾಗಿ ಕೀಳಾಗಿ ಕಾಣಿಸುವುದು ಅಥವಾ ಅವರ ಧಾರ್ಮಿಕ ಹಾಗೂ ಸಾರ್ವಜನಿಕ ಭಾಗವಹಿಸುವಿಕೆಯನ್ನು ಜಾತಿಯ ಆಧಾರದ ಮೇಲೆ ಪ್ರಶ್ನಿಸುವುದು ಸಮಾಜದ ಸಮಾನತೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ.

“ನಾನು ಪರಿಶಿಷ್ಟ ಜಾತಿಗೆ ಸೇರಿದವನು ಎಂಬ ಕಾರಣಕ್ಕಾಗಿ ನನ್ನನ್ನು ಹಾಗೂ ಇತರ ದಲಿತ ಮುಖಂಡರನ್ನು ಸಾರ್ವಜನಿಕವಾಗಿ ಅವಮಾನಿಸುವುದು ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ನಮ್ಮ ಭಾಗವಹಿಸುವಿಕೆಯನ್ನು ಪ್ರಶ್ನಿಸುವುದು ಅತ್ಯಂತ ಗಂಭೀರ ವಿಷಯವಾಗಿದೆ. ಈ ಪ್ರಕರಣದಲ್ಲಿ ಕಾನೂನು ಪ್ರಕಾರ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ದಲಿತ ಮುಖಂಡ ದೂರು ನೀಡಿದ ದೂರುದಾರರಾದ ದೊಡ್ಡ ಬಸವರಾಜ್ ಅವರು ಒತ್ತಾಯಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಿ, ಘಟನೆಯಲ್ಲಿ ಭಾಗಿಯಾಗಿರುವ ಸಾಕ್ಷಿಗಳು, ವಿಡಿಯೋ/ಆಡಿಯೋ ದಾಖಲೆಗಳು ಹಾಗೂ ಇತರ ಲಭ್ಯ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಜಾತಿ ಆಧಾರಿತ ಅವಮಾನ, ತಾರತಮ್ಯ ಮತ್ತು ದೌರ್ಜನ್ಯಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಸಂವಿಧಾನ ನೀಡಿರುವ ಸಮಾನತೆ, ಗೌರವ ಮತ್ತು ಸಾಮಾಜಿಕ ನ್ಯಾಯದ ಹಕ್ಕುಗಳನ್ನು ಪ್ರತಿಯೊಬ್ಬರಿಗೂ ಸಮಾನವಾಗಿ ರಕ್ಷಿಸಬೇಕು ಎಂದು ದೂರುದಾರರಾದ ದೊಡ್ಡ ಬಸವರಾಜ ಬಡಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನು ಈ ಕುರಿತಂತೆ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎನ್ನಲಾಗಿದೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">