Kampli : 25 ವರ್ಷಗಳ ಬಳಿಕ ಒಂದಾದ ಹಳೆಯ ವಿದ್ಯಾರ್ಥಿಗಳು : SN ಪೇಟೆ ಶಾಲೆಯಲ್ಲಿ ಸ್ನೇಹ ಸಮ್ಮಿಲನ

 

25 ವರ್ಷಗಳ ಬಳಿಕ ಒಂದಾದ ಹಳೆಯ ವಿದ್ಯಾರ್ಥಿಗಳು: ಗುರುವಂದನೆ, ಸ್ನೇಹ ಸಮ್ಮಿಲನದಲ್ಲಿ ಭಾವನಾತ್ಮಕ ಕ್ಷಣಗಳು

ಕಂಪ್ಲಿ, ಅ.4: ಅಕ್ಷರ ಕಲಿಸಿದ ಗುರುಗಳಿಗೆ ವಂದನೆ ಸಲ್ಲಿಸುವುದರ ಜೊತೆಗೆ, ಬಾಲ್ಯದ ಗೆಳೆಯ–ಗೆಳತಿಯರನ್ನು ಮತ್ತೆ ಒಂದೆಡೆ ಸೇರಿಸಿ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಅಪರೂಪದ ಕ್ಷಣಕ್ಕೆ ಕಂಪ್ಲಿ ಸಾಕ್ಷಿಯಾಯಿತು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ (SN ಪೇಟೆ) ಶಾಲೆಯ 2001–02ನೇ ಸಾಲಿನ ಏಳನೇ ತರಗತಿಯ ಹಳೆಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಭಾನುವಾರ ಶಾಲಾ ಆವರಣದಲ್ಲಿ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಸಂಭ್ರಮದಿಂದ ಆಯೋಜಿಸಲಾಯಿತು. ಸುಮಾರು 25 ವರ್ಷಗಳ ಬಳಿಕ ಒಂದೆಡೆ ಸೇರಿದ ಹಳೆಯ ವಿದ್ಯಾರ್ಥಿಗಳು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು, ಪರಸ್ಪರ ಆತ್ಮೀಯವಾಗಿ ಭೇಟಿಯಾಗಿ ಸಂತಸ ಹಂಚಿಕೊಂಡರು.

ಕಾರ್ಯಕ್ರಮದ ಅಂಗವಾಗಿ ಹಳೆಯ ವಿದ್ಯಾರ್ಥಿಗಳು ತಮಗೆ ಅಕ್ಷರಜ್ಞಾನ, ಶಿಸ್ತು ಹಾಗೂ ಜೀವನ ಮೌಲ್ಯಗಳನ್ನು ಕಲಿಸಿದ ನಿವೃತ್ತ ಶಿಕ್ಷಕರನ್ನು ಗೌರವಿಸಿ ಪಾದಪೂಜೆ ನೆರವೇರಿಸಿ ಸನ್ಮಾನಿಸಿದರು. ಶಿಕ್ಷಕರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಗೌರವಿಸುವುದು ಅತ್ಯಂತ ಸಂತಸದ ಹಾಗೂ ಭಾವನಾತ್ಮಕ ಕ್ಷಣವಾಗಿ ಮೂಡಿಬಂದಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕರು, ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆಯಾಗಿದ್ದು, ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಮೂಲಕ ಆರೋಗ್ಯಪೂರ್ಣ ಹಾಗೂ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಸರ್ಕಾರಿ ಶಾಲೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉತ್ತಮ ಜೀವನ ರೂಪಿಸಿಕೊಂಡಿದ್ದಾರೆ. ಇಂದಿನ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪೋಷಕರು ಹಾಗೂ ಶಿಕ್ಷಕರು ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ಹಳೆಯ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಕ್ಷಕರು ಬೀರಿದ ಪ್ರಭಾವವನ್ನು ಸ್ಮರಿಸಿಕೊಂಡರು. ಬಾಲ್ಯದಲ್ಲಿ ಒಟ್ಟಿಗೆ ಕಲಿತ ಸ್ನೇಹಿತರು 25 ವರ್ಷಗಳ ಬಳಿಕ ಮತ್ತೆ ಭೇಟಿಯಾಗಿರುವುದು ಎಲ್ಲರಲ್ಲೂ ಅಪಾರ ಸಂತಸ ಮೂಡಿಸಿತು. ಪರಸ್ಪರ ತಮ್ಮ ಕುಟುಂಬ, ಉದ್ಯೋಗ ಹಾಗೂ ಜೀವನದ ಬೆಳವಣಿಗೆಗಳ ಕುರಿತು ವಿಚಾರ ವಿನಿಮಯ ಮಾಡಿಕೊಂಡು, ಹಳೆಯ ನೆನಪುಗಳನ್ನು ಹಂಚಿಕೊಂNEWS 

ಕಾರ್ಯಕ್ರಮದಲ್ಲಿ ಶಾಲೆಯ ಅಂದಿನ ಶಿಕ್ಷಕರಾದ ಭಾರತಿ, ದ್ರೌಪತಿ, ರೇವಯ್ಯ, ನಾಗಯ್ಯಸ್ವಾಮಿ, ದೊಡ್ಮನಿ, ಶಶಿಧರ ಹಾಗೂ ಗಂಗಾಧರಯ್ಯ ಭಾಗವಹಿಸಿದ್ದರು. ಇದೇ ವೇಳೆ ದಿವಂಗತ ಶಿಕ್ಷಕರಾದ ಭೋಗೇಶಾಚಾರ್, ಲಲಿತಮ್ಮ, ಸಚ್ಚಿದಾನಂದ ಮತ್ತು ಸೋಮಪ್ಪ ಅವರನ್ನು ಸ್ಮರಿಸಿ ಮೌನಾಚರಣೆ ನಡೆಸಿ ಗೌರವ ಸಲ್ಲಿಸಲಾಯಿತು.

ಹಳೆಯ ವಿದ್ಯಾರ್ಥಿಗಳ ಬಳಗ ಹಾಗೂ ಸ್ನೇಹ ಸಮ್ಮೇಳನದ ಅಧ್ಯಕ್ಷ ರವಿ, ಉಪಾಧ್ಯಕ್ಷ ನಾಗಾರ್ಜುನ, ಕಾರ್ಯದರ್ಶಿಗಳಾದ ವಿಷ್ಣು ಮತ್ತು ಭಾಸ್ಕರ, ಖಜಾಂಚಿ ಎಜಾಜ್ ಹಾಗೂ ಸದಸ್ಯರಾದ ಫಕ್ರುದ್ದೀನ್, ರಾಘವೇಂದ್ರ, ಎನ್. ಶ್ರೀನಿವಾಸ್, ವೆಂಕಟೇಶ್, ದಾವೂದ್, ಶ್ರೀನಿವಾಸ್, ರಮೇಶ್, ಗಾಜಿ ಅಹಮದ್, ಸಾವಿತ್ರಿ, ದೇವಿಕಾಭಾಯಿ, ವಿಜಯಲಕ್ಷ್ಮಿ, ನಾಗಮಣಿ, ಡಿ. ರೇಖಾ, ವೀಣಾ, ಮಂಜುಶ್ರೀ, ಪಾರ್ವತಿ, ರಾಧಾ, ಕುಲುಸ್ಮ, ಸಲ್ಮಾ, ಶಶಿರೇಖಾ ಸೇರಿದಂತೆ ಅನೇಕ ಸ್ನೇಹಿತರು ಭಾಗವಹಿಸಿದ್ದರು.

ಸಂಘಟಕರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದು, 25 ವರ್ಷಗಳ ನಂತರವೂ ಗುರುಗಳ ಮೇಲಿನ ಗೌರವ ಹಾಗೂ ಗೆಳೆಯರ ಮೇಲಿನ ಸ್ನೇಹ ಅಚಲವಾಗಿದೆ ಎಂಬುದನ್ನು ಈ ಸಮ್ಮಿಲನ ಸಾರಿತು. ಗುರು–ಶಿಷ್ಯರ ಬಾಂಧವ್ಯ ಹಾಗೂ ಬಾಲ್ಯದ ಸ್ನೇಹಕ್ಕೆ ಕಾಲದ ಅಂತರವೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಈ ಕಾರ್ಯಕ್ರಮ ಉತ್ತಮ ನಿದರ್ಶನವಾಯಿತು.

SIDDI TV NEWS
ನೈತಿಕ ಹಾಗೂ ಸ್ವತಂತ್ರ ಮಾಧ್ಯಮ
Previous Post Next Post

Contact Form

f="https://unpkg.com/video.js/dist/video-js.css" rel="stylesheet">