ಪಟ್ಟಣದ ವೀರಶೈವ ಭವನದಲ್ಲಿ ಗಂಡುಗಲಿ ಕುಮಾರರಾಮ ವೈಭವ ವೇದಿಕೆಯಲ್ಲಿ ಬಳ್ಳಾರಿ ಜಿಲ್ಲಾ ಕಂಪ್ಲಿ ತಾಲೂಕು ಶಾಮಿಯಾನ್ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ 3ನೇ ಮಹಾ ಅಧಿವೇಶನದ ಎರಡನೇ ದಿನದ ಸಮಾರಂಭವನ್ನು ಉದ್ಘಾಟಿಸಿ, ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಕಾರ್ಯಕ್ರಮಕ್ಕೆ ಕಲ್ಮಠ ಶ್ರೀಗಳ ಜೊತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸಪ್ಪ, ಉದ್ಯಮಿ ಮತ್ತು ಸಮಾಜ ಸೇವಕ ರಾಜೇಶ್, ಮಾಜಿ ಪುರಸಭೆ ಅಧ್ಯಕ್ಷ ಸುದೀರ್, ಬಿ.ನಾರಾಯಣಪ್ಪ, ಲಿಂಗಾಯತ ಮಹಾವೇದಿಕೆಯ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ್ ಸೇರಿದಂತೆ ಅನೇಕರು ಮೊದಲ ದಿನದಂದು ಜಂಟಿಯಾಗಿ ಚಾಲನೆ ನೀಡಿದರು . ಇನ್ನು ಕಾರ್ಯಕ್ರಮದಲ್ಲಿ ವೃತ್ತಿ ಬಾಂದವರ ಸಮ್ಮಿಲನ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಶೇಷವಾಗಿ ಸಾಮಾಗ್ರಿಗಳ ಸ್ಟಾಲ್ ಗಳು ಗಮನಸೆಳೆದವು.
ಯುಗಯುಗಗಳಿಂದಲೂ ಮದುವೆ ಸೇರಿದಂತೆ ವಿವಿಧ ಶುಭ ಸಮಾರಂಭಗಳಿಗೆ ಚಪ್ಪರ ನಿರ್ಮಿಸಿ ನೆರಳು ನೀಡುವ ಶಾಮಿಯಾನ್ ವೃತ್ತಿ ಇಂದು ಆಧುನಿಕತೆಯ ಸ್ಪರ್ಶದೊಂದಿಗೆ ಮತ್ತಷ್ಟು ವೈಭವ ಪಡೆದಿದೆ. ಜಾತಿ, ಧರ್ಮ, ಲಿಂಗ, ವರ್ಣ ಹಾಗೂ ಪಕ್ಷಭೇದವಿಲ್ಲದೆ ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಈ ವೃತ್ತಿಯಲ್ಲಿದೆ ಎಂದು ಅವರು ತಿಳಿಸಿದರು.
ವೃತ್ತಿಯ ಗೌರವವನ್ನು ಉಳಿಸಿಕೊಂಡು ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉಜ್ವಲ ಭವಿಷ್ಯ ರೂಪಿಸಬೇಕು ಎಂದು ಕರೆ ನೀಡಿದ ಅವರು, ಸಂಘಟಿತ ಪ್ರಯತ್ನಗಳ ಮೂಲಕ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯವಿದೆ ಎಂದರು.
ಮುಸ್ಲಿಂ ಧರ್ಮಗುರು ಡಾ. ಸೈಯದ್ ಷಾ ನೂರ್ ಅಹ್ಮದ್ ಖಾದ್ರಿ ಹಾಗೂ ಫಾದರ್ ಪಾಲ್ ಪಂಪಾಪತಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ನಂತರ ಮಕ್ಕಳಿಂದ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು.
ನೈತಿಕ ಹಾಗೂ ಸ್ವತಂತ್ರ ಮಾಧ್ಯಮ
