Kampli : ಇಂಫೋಸಿಸ್‌ನಿಂದ ಕಂಪ್ಲಿಯ ಶುಗರ್ ಫ್ಯಾಕ್ಟರಿ ಸರ್ಕಾರಿ ಶಾಲೆಗೆ 10 ಕಂಪ್ಯೂಟರ್ ದಾನ


ಇಂಫೋಸಿಸ್‌ನಿಂದ ಕಂಪ್ಲಿ ಸರ್ಕಾರಿ ಶಾಲೆಗೆ 10 ಕಂಪ್ಯೂಟರ್ ದಾನ 

ಕಂಪ್ಲಿ, ಜೂನ್ 29 : 

ಕಂಪ್ಲಿಯ ಸಕ್ಕರೆ ಕಾರ್ಖಾನೆಯ ಬಳಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಳೆಯ ವಿದ್ಯಾರ್ಥಿಗಳ ಮುಂದಾಳತ್ವದಲ್ಲಿ ಇಂಫೋಸಿಸ್ ಕಂಪನಿಯಿಂದ 10 ಕಂಪ್ಯೂಟರ್‌ಗಳನ್ನು ದಾನವಾಗಿ ನೀಡಲಾಗಿದೆ.

ಜೂನ್ 28, ಶನಿವಾರ ಮಧ್ಯಾಹ್ನ 1:30 ಕ್ಕೆ, ಹಳೆಯ ವಿದ್ಯಾರ್ಥಿಗಳು ಶಾಲೆಗೆ ಭೇಟಿ ನೀಡಿ, ಶಾಲಾ ಮುಖ್ಯಗುರು ಡಿ. ಪ್ರಭಾಕರ್ ಹಾಗೂ ಶಿಕ್ಷಕರಿಗೆ ಈ ಕಂಪ್ಯೂಟರ್‌ಗಳನ್ನು ಹಸ್ತಾಂತರಿಸಿದರು.

ಈ ಯೋಜನೆಯ ಹಿಂದಿರುವ ಪ್ರಮುಖ ಹಳೆಯ ವಿದ್ಯಾರ್ಥಿಗಳಲ್ಲಿ ಜಯತೀರ್ಥ, ವೆಂಕಟೇಶ್, ರಂಗಸ್ವಾಮಿ, ಸತೀಶ್, ಕಿನ್ನಾರೇಶ್ವರ ಎಂಬವರು ವಿಶೇಷವಾಗಿ ಪಾಲ್ಗೊಂಡಿದ್ದರು.

ಎಸ್.ಡಿಎಂಸಿ ಅಧ್ಯಕ್ಷ ರಾಮಲಿಂಗ ಅವರು ಈ ಕಾರ್ಯಕ್ರಮದಲ್ಲಿ ಸಹಭಾಗಿಯಾಗಿದ್ದರು.

ಈ ಹೊಸ ಕಂಪ್ಯೂಟರ್‌ಗಳಿಂದ ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣದ ಅವಕಾಶ ದೊರಕಲಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ತಾಂತ್ರಿಕ  ಶಿಕ್ಷಣ ನೀಡಲು ಇದು ದಾರಿ ತೆರೆದಿದೆ ಎಂದು ಶಾಲಾ ಸಿಬ್ಬಂದಿಗಳು ಹಾಗೂ ಹಳೆ ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">