ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ವಿವಿಧ ಭಾಗಗಳಲ್ಲಿ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಯಿಂದ ವಿದ್ಯುತ್ ಕಂಬಗಳು ಹಾನಿಗೊಳಗಾಗಿವೆ.
ದಿನಾಂಕ 14ರ ರಾತ್ರಿ ಸುರಿದ ಮಳೆ ಮತ್ತು ಗಾಳಿಯ ಪರಿಣಾಮವಾಗಿ ಕಂಪ್ಲಿ ತಾಲೂಕಿನ ಇಟಿಗಿ, ನಂ.2 ಮುದ್ದಾಪುರ ಹಾಗೂ ಮೆತ್ರಿ ಸೆಕ್ಷನ್ ವ್ಯಾಪ್ತಿಯಲ್ಲಿ ಒಟ್ಟು 6 ವಿದ್ಯುತ್ ಕಂಬಗಳು (ಲೈನ್ ಸಪೋರ್ಟ್) ಹಾನಿಗೊಂಡಿವೆ ಎಂದು ಕಂಪ್ಲಿಯ ಓ ಅಂಡ್ ಎಮ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಾನಿಗೊಂಡ ಕಂಬಗಳ ದುರಸ್ತಿ ಕಾರ್ಯವನ್ನು ವಿದ್ಯುತ್ ಇಲಾಖೆ ಸಿಬ್ಬಂದಿ ಕೈಗೊಂಡಿದ್ದು, ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಿ, ಹಾನಿಗೊಂಡ ವಿದ್ಯುತ್ ಕಂಬಗಳು ಅಥವಾ ತಂತಿಗಳ ಬಳಿ ಹೋಗದಂತೆ ಇಲಾಖೆ ಮನವಿ ಮಾಡಿದೆ.
