Kampli : ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ


ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ

ಬಳ್ಳಾರಿ / ಕಂಪ್ಲಿ: ಪಟ್ಟಣದ ಹಳೆಯ ಯ 2002-03ನೇ ಸಾಲಿನ 7ನೇ ತರಗತಿ ಹಳೆಯ ವಿದ್ಯಾರ್ಥಿಗಳು ಭಾನುವಾರ ತಾಲೂಕಿನ ರಾಮಸಾಗರ ಸಮೀಪದ ನಲ್ಲಿ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ತಮ್ಮ ನೆಚ್ಚಿನ ಗುರುಗಳಿಗೆ ಹಳೆಯ ವಿದ್ಯಾರ್ಥಿಗಳು ಭಾವಪೂರ್ಣ ಸ್ವಾಗತ ಕೋರಿದರು. ಹಲವು ವರ್ಷಗಳ ಬಳಿಕ ಒಂದೆಡೆ ಸೇರಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿ ಸಂಭ್ರಮಿಸಿದರು.

ತಮಗೆ ಅಕ್ಷರ ಜ್ಞಾನ ಕಲಿಸಿದ ಶಿಕ್ಷಕರನ್ನು ಸನ್ಮಾನಿಸುವ ಮೂಲಕ ಹಳೆಯ ವಿದ್ಯಾರ್ಥಿಗಳು ಗುರುಭಕ್ತಿ ಮೆರೆದರು. ಹಲವು ವರ್ಷಗಳ ನಂತರ ತಮ್ಮ ವಿದ್ಯಾರ್ಥಿಗಳನ್ನು ಕಂಡ ಶಿಕ್ಷಕರು ಭಾವುಕರಾದರು. ವಿದ್ಯಾರ್ಥಿಗಳ ಪ್ರೀತಿ, ಗೌರವ ಕಂಡು ಶಿಕ್ಷಕರ ಕಣ್ಣಂಚಿನಲ್ಲಿ ಆನಂದಭಾಷ್ಪ ಮೂಡಿತು.

ದೈಹಿಕ ಶಿಕ್ಷಕ ಮಾತನಾಡಿ, “ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಸ್ಮರಿಸಿ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಿಜಕ್ಕೂ ಸಂತಸದ ವಿಚಾರ. ಬಾಲ್ಯದಲ್ಲಿ ಗುರುಗಳ ಶ್ರಮದ ಮಹತ್ವ ಅರ್ಥವಾಗದೇ ಇರಬಹುದು. ಆದರೆ ವರ್ಷಗಳು ಕಳೆದಂತೆ ಶಿಕ್ಷಕರ ತ್ಯಾಗ ಮತ್ತು ಸೇವೆಯ ಮೌಲ್ಯ ತಿಳಿಯುತ್ತದೆ” ಎಂದರು.

ಮುಖ್ಯಗುರು ಮಾತನಾಡಿ, “ಉದ್ಯೋಗ ಹಾಗೂ ಜೀವನದ ಒತ್ತಡದಲ್ಲಿ ಜನರು ತಮ್ಮ ಹುಟ್ಟೂರನ್ನು, ಹೆತ್ತವರನ್ನು ಮತ್ತು ಅಕ್ಷರ ಕಲಿಸಿದ ಗುರುಗಳನ್ನು ಮರೆತುಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭಗಳಲ್ಲಿ ಹಳೆಯ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಬಾಲ್ಯದ ನೆನಪುಗಳನ್ನು ಮತ್ತೆ ಜೀವಂತಗೊಳಿಸುವ ಕಾರ್ಯಕ್ರಮಗಳು ಅತ್ಯಂತ ಅಗತ್ಯ” ಎಂದು ಅಭಿಪ್ರಾಯಪಟ್ಟರು.

ಹಳೆಯ ವಿದ್ಯಾರ್ಥಿಗಳು ಮಾತನಾಡಿ, “ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಶಾಶ್ವತವಲ್ಲ. ಆದರೆ ಗುರುಗಳು ಕಲಿಸಿದ ವಿದ್ಯೆ ಮಾತ್ರ ಜೀವನಪೂರ್ತಿ ಜೊತೆಗಿರುತ್ತದೆ. ಬಾಲ್ಯದಲ್ಲಿ ನೀಡಿದ ನಿಸ್ವಾರ್ಥ ಶಿಕ್ಷಣದ ಫಲವಾಗಿ ನಾವು ಜೀವನದಲ್ಲಿ ಯಶಸ್ಸು ಸಾಧಿಸಿದ್ದೇವೆ” ಎಂದು ಗುರುಗಳ ಸೇವೆಯನ್ನು ಕೊಂಡಾಡಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ , , , ಹಾಗೂ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ನಂತರ ಸ್ನೇಹಿತರೆಲ್ಲರೂ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ದಿನವಿಡೀ ಹಳೆಯ ನೆನಪುಗಳಲ್ಲಿ ತೇಲಿದ ಸ್ನೇಹಿತರು ಮಧುರ ನೆನಪುಗಳೊಂದಿಗೆ ವಿದಾಯ ಪಡೆದರು.

ಈ ಸಂದರ್ಭದಲ್ಲಿ 2002-03ನೇ ಸಾಲಿನ ವಿದ್ಯಾರ್ಥಿಗಳಾದ ಕೆ. ಶ್ವೇತಾ, ಜೆ.ಬಿ. ವಿನಾಯಕ, ನವೀನ್, ಧನಪಾಲ್ ಕಿರಣ್, ಸಾಗರ್, ಎನ್. ಮಂಜುನಾಥ, ದೀಪಾಶ್ರೀ, ದೀಪಾ, ರೇಖಾ, ವನಜಾಕ್ಷಿ, ತುಳಸಿ, ವೀರನಗೌಡ, ಪ್ರೀತಿ, ಸಂತೋಷ, ನಾಗರಾಜ, ಶ್ರುತಿ, ಈಶ್ವರಿ, ಸಂದೀಪ್, ಲಿಂಗರಾಜ್, ವೆಂಕಟೇಶ್, ಉಮೇಶ್, ರಘು, ಮಂಜು, ರಾಘವೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Previous Post Next Post

Contact Form

f="https://unpkg.com/video.js/dist/video-js.css" rel="stylesheet">