Kampli : ಅಪಾಯಕಾರಿ ವಿದ್ಯುತ್ ಕಂಬ, ತಂತಿ ಕಂಡರೆ ತಕ್ಷಣ ಮಾಹಿತಿ ನೀಡಿ: ಜೆಸ್ಕಾಂ ಮನವಿ


ಅಪಾಯಕಾರಿ ವಿದ್ಯುತ್ ಕಂಬ, ತಂತಿ ಕಂಡರೆ ತಕ್ಷಣ ಮಾಹಿತಿ ನೀಡಿ: ಜೆಸ್ಕಾಂ ಮನವಿ

ಕಂಪ್ಲಿ: ಸೆಪ್ಟೆಂಬರ್ 03, 2026

ಕಂಪ್ಲಿ ಪಟ್ಟಣ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಮುರಿದಿರುವ, ಬಾಗಿರುವ ವಿದ್ಯುತ್ ಕಂಬಗಳು ಹಾಗೂ ಕೆಳಗೆ ಜೋತುಬಿದ್ದಿರುವ ವಿದ್ಯುತ್ ತಂತಿಗಳು ಕಂಡುಬಂದರೆ ಸಾರ್ವಜನಿಕರು ಕೂಡಲೇ ಜೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಕಂಪ್ಲಿ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.

ಅಪಾಯಕಾರಿ ವಿದ್ಯುತ್ ಕಂಬ ಅಥವಾ ತಂತಿ ಕಂಡುಬಂದಲ್ಲಿ ಫೋಟೋ, ನಿಖರ ವಿಳಾಸ ಹಾಗೂ ಲೊಕೇಶನ್ ಸಮೇತ ಸಂಬಂಧಪಟ್ಟ ಅಧಿಕಾರಿಗಳ ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಬೇಕು. ಮಾಹಿತಿ ದೊರೆತ ತಕ್ಷಣ ಜೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ತುರ್ತು ದುರಸ್ತಿ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

⚠️ ಸಾರ್ವಜನಿಕರಿಗೆ ಮುಖ್ಯ ಸೂಚನೆ:
ವಿದ್ಯುತ್ ಕಂಬ ಅಥವಾ ತಂತಿ ಅಪಾಯಕಾರಿ ಸ್ಥಿತಿಯಲ್ಲಿ ಕಂಡುಬಂದರೆ ಅದರ ಸಮೀಪ ಹೋಗದೆ, ತಕ್ಷಣ ಜೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿ.

ವಿದ್ಯುತ್ ಮಾರ್ಗಗಳ ಸುರಕ್ಷತಾ ಅಂತರ

ಕೇಂದ್ರ ವಿದ್ಯುತ್ ಪ್ರಾಧಿಕಾರ ಹಾಗೂ ಭಾರತೀಯ ವಿದ್ಯುತ್ ಕಾಯ್ದೆ 2003ರ ಪ್ರಕಾರ ಕಟ್ಟಡ ಮತ್ತು ವಿದ್ಯುತ್ ಮಾರ್ಗಗಳ ನಡುವೆ ನಿಯಮಾನುಸಾರ ಸುರಕ್ಷತಾ ಅಂತರ ಕಾಪಾಡಿಕೊಳ್ಳಬೇಕು.

  • ಕಡಿಮೆ ಒತ್ತಡದ ಮಾರ್ಗಗಳು (LT Lines – 650V ವರೆಗೆ): ಚಾವಣಿ/ಬಾಲ್ಕನಿಯಿಂದ ಲಂಬವಾಗಿ ಕನಿಷ್ಠ 2.5 ಮೀಟರ್ ಹಾಗೂ ಸಮತಲವಾಗಿ ಕನಿಷ್ಠ 1.2 ಮೀಟರ್ ಅಂತರವಿರಬೇಕು.
  • ಹೆಚ್ಚು ಒತ್ತಡದ ಮಾರ್ಗಗಳು (HT Lines – 650V ನಿಂದ 33KV ವರೆಗೆ): ಕಟ್ಟಡದ ಅತ್ಯುನ್ನತ ಭಾಗದಿಂದ ಲಂಬವಾಗಿ ಕನಿಷ್ಠ 3.7 ಮೀಟರ್ ಹಾಗೂ ಸಮತಲವಾಗಿ 1.2 ರಿಂದ 2.0 ಮೀಟರ್ ಅಂತರ ಕಡ್ಡಾಯವಾಗಿದೆ.

📞 ಸಂಪರ್ಕಿಸಬೇಕಾದ ಅಧಿಕಾರಿಗಳು

ಶ್ರೀನಿವಾಸ್ ಪ್ರಸಾದ್ – ಎಇಇ, ಕಂಪ್ಲಿ

ಭೀಮೇಶ್ – ಎಇ, ಕಂಪ್ಲಿ

ವಿನೋದ್ ಕುಮಾರ್ – ಎಇ, ಕಂಪ್ಲಿ ಪಟ್ಟಣ, ರಾಮಸಾಗರ, ನಂ.10 ಮುದ್ದಾಪುರ

ಮಂತೇಶ್ ತುಂಬದ್ – ಎಇ, ಕಂಪ್ಲಿ ಗ್ರಾಮೀಣ, ಹಂಪಾದೇವನಹಳ್ಳಿ, ಸಣಾಪುರ, ದೇವಸಮುದ್ರ

ಸಾಮಿಯುಲ್ಲಾ – ಎಇ, ಮೆಟ್ರಿ ಸೆಕ್ಷನ್, ಸುಗ್ಗಿನಹಳ್ಳಿ, ದೇವಲಾಪುರ

ವಿಜಯ್ ಕುಮಾರ್ – ಹಿರಿಯ ಸಹಾಯಕ (ಬಿಲ್ಲಿಂಗ್ ಸಂಬಂಧಿತ ದೂರು)

ವಿದ್ಯುತ್ ವ್ಯತ್ಯಯ / ಇತರೆ ದೂರುಗಳು

ಗ್ರಾಹಕರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಯ ಗ್ರಾಮೀಣ ವಿದ್ಯುತ್ ಪ್ರತಿನಿಧಿಗಳನ್ನು ಸಂಪರ್ಕಿಸಿ ದೂರು ದಾಖಲಿಸಬಹುದು ಎಂದು ಜೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸುದ್ದಿ ಮೂಲ: ಕರ್ನಾಟಕ ವಾರ್ತೆ- ವರದಿ : ಸಿದ್ದಿ ಟಿವಿ ರಘುವೀರ್, ಕಂಪ್ಲಿ

📺 ಸಿದ್ದಿ ಟಿವಿ – ಕಂಪ್ಲಿ ಮತ್ತು ಬಳ್ಳಾರಿ ಜಿಲ್ಲೆಯ ಸ್ಥಳೀಯ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">