Kampli : ಭಜರಂಗಿ ಮೋಹನ್ ಅವರ ಹುಟ್ಟು ಹಬ್ಬದ ಅಂಗವಾಗಿ ಹಣ್ಣು, ಬ್ರೆಡ್ ವಿತರಣೆ


ಭಜರಂಗಿ ಮೋಹನ್ ಅವರ ಹುಟ್ಟು ಹಬ್ಬದ ಅಂಗವಾಗಿ ಹಣ್ಣು, ಬ್ರೆಡ್ ವಿತರಣೆ 

ಕಂಪ್ಲಿ : 

 ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕನ್ನಡ ಚಲನಚಿತ್ರದ ಹೆಸರಾಂತ ಕೊರಿಯೋಗ್ರಾಫರ್ ಭಜರಂಗಿ ಮೋಹನ್ ಅವರ ಹುಟ್ಟುಹಬ್ಬದ ಅಂಗವಾಗಿ ಗುರುವಾರ ಅಭಿಮಾನಿಗಳ ವತಿಯಿಂದ ರೋಗಿಗಳಿಗೆ ಹಣ್ಣು, ಬ್ರೆಡ್ ಮತ್ತು ಮಜ್ಜಿಗೆ ವಿತರಿಸಲಾಯಿತು. 

ಮುಖಂಡರಾದ ರಾಮಚಂದ್ರ ಮಾತನಾಡಿ ಭಜರಂಗಿ ಮೋಹನ್ ಅವರು ನೃತ್ಯ ನಿರ್ದೇಶಕರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ. ನಾಯಕ ನಟನಾಗಿ ಒಂದು ಚಲನಚಿತ್ರದಲ್ಲಿ ಅಭಿನಯಿಸುವ ಜೊತೆಗೆ ಇದೀಗ ಚಲನಚಿತ್ರ ನಿರ್ದೇಶಕರಾಗಿ ಸಿನಿಮಾ ನಿರ್ದೇಶಿಸಲು ತಯಾರಿಯಲ್ಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಗಲು ಪ್ರಾರ್ಥಿಸಿ ಎಂದು ವಿವೇದ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ಪ್ರಮುಖರಾದ ನೀಲಪ್ಪ ಪೆಂಟರ್, ಗೋಪಿನಾಥ್, ರಾಜು ಮಂಜು, ಯುವರಾಜ್, ರಾಜ್, ನಂಜುಂಡ, ಮುತ್ತು, ಮಾರೆಪ್ಪ ಸೇರಿದಂತೆ ಇತರರಿದ್ದರು.

Previous Post Next Post

AD

 


Siddi TV

Contact Form

f="https://unpkg.com/video.js/dist/video-js.css" rel="stylesheet">