SIR ವಿಚಾರದಲ್ಲಿ ಸುಳ್ಳು ವದಂತಿ ಹರಡಿದವರ ವಿರುದ್ಧ ಕ್ರಮ: ತಹಶೀಲ್ದಾರ್ ಎಚ್ಚರಿಕೆ..!
SIR ಗೊಂದಲ : ತಹಶೀಲ್ದಾರ್ ಸ್ಪಷ್ಟನೆ
ಕಂಪ್ಲಿ, ಸೆ.28: ಕಂಪ್ಲಿ ತಾಲೂಕಿನಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಉಂಟಾಗಿರುವ ಗೊಂದಲ ಇನ್ನೂ ಬಗೆಹರಿಯದಿರುವ ನಡುವೆಯೇ, ನಗರದ ಕೋಟೆ ಪ್ರದೇಶದ ಮುಸ್ಲಿಂ ಸಮುದಾಯದವರು ಸೋಮವಾರ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ, ತಮ್ಮ ಪ್ರಶ್ನೆಗಳನ್ನು ತಹಶಿಲ್ದಾರರ ಮುಂದಿಟ್ಟಿದ್ದಾರೆ.
BLO-1 ಹಾಗೂ BLO-2 ಸಿಬ್ಬಂದಿಗಳು ಮತದಾರರ ಪಟ್ಟಿಯ ತಿದ್ದುಪಡಿ ಪ್ರಕ್ರಿಯೆಯಲ್ಲಿ ಅವ್ಯವಸ್ಥೆ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. 7ನೇ ನಮೂನೆ (Form-7) ಹಾಗೂ Declaration/Objection ಅರ್ಜಿಗಳನ್ನು ಅನುಚಿತವಾಗಿ ಬಳಸಿಕೊಂಡು, ಸ್ಥಳದಲ್ಲೇ ವಾಸವಾಗಿರುವ ಕೆಲ ಮತದಾರರನ್ನು ಬೇರೆಡೆಗೆ ವರ್ಗಾವಣೆಗೊಂಡಿದ್ದಾರೆ ಎಂದು ತೋರಿಸಿ ಸುಳ್ಳು ಅರ್ಜಿಗಳನ್ನು ಭರ್ತಿ ಮಾಡಲಾಗಿದೆ ಎಂದು ದೂರಿದರು.
ಈ ವಿಷಯ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸಮುದಾಯದ ಮುಖಂಡರು ಹಾಗೂ ನಿವಾಸಿಗಳು ತಹಶೀಲ್ದಾರ್ ಕಚೇರಿಗೆ ತೆರಳಿ ಅಧಿಕಾರಿಗಳಿಂದ ಸ್ಪಷ್ಟನೆ ಕೋರಿದರು.
“ನಿಮ್ಮ ಬಳಿ ಹರಿದಾಡುತ್ತಿರುವ ಅರ್ಜಿಗಳು ನಮ್ಮ ಅಧಿಕೃತ ದಾಖಲೆಗಳಲ್ಲ. ಯಾವುದೇ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ನಿಗದಿತ ಕಾನೂನು ಪ್ರಕ್ರಿಯೆ ಇದೆ. ಸಂಬಂಧಪಟ್ಟ ವ್ಯಕ್ತಿಗೆ ನೋಟಿಸ್ ನೀಡದೇ ಮತದಾರರ ಹೆಸರನ್ನು ಅಳಿಸುವ ಪ್ರಶ್ನೆಯೇ ಇಲ್ಲ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು.”
ಅಲ್ಲದೆ, SIR ಪ್ರಕ್ರಿಯೆ ಕುರಿತು ಸುಳ್ಳು ಮಾಹಿತಿ ಹರಡುವುದು ಅಥವಾ ಅನಗತ್ಯ ಗೊಂದಲ ಸೃಷ್ಟಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಂಪ್ಲಿ ತಹಶೀಲ್ದಾರ್ ಜೂಗಲ ಮಂಜು ನಾಯಕ್ ಎಚ್ಚರಿಕೆ ನೀಡಿದರು.
ವೀಡಿಯೋ ನೋಡಿ :
ರಘುವೀರ್, ಸಿದ್ದಿ ಟಿವಿ, ಕಂಪ್ಲಿ
